Bangalore: ಇಂದು ಬೆಳಗ್ಗೆ ಸೂಟ್ ಹಿಡಿದುಕೊಂಡು 39 ವರ್ಷದ ಮಹಿಳೆಯೊಬ್ಬಳು ಮೈಕೊಲೇಔಟ್ ಪೊಲೀಸ್ ಸ್ಟೇಷನ್ ಗೆ ಹೋಗಿದ್ದಾಳೆ. ಅಲ್ಲಿದ್ದವರು ಏನೋ ಎನ್ ಕ್ವಾಯರಿಗೆ ಬಂದಿರಬಹುದು ಎಂದು ಸುಮ್ಮನೇ ಇದ್ರು. ಆದ್ರೆ ಸಡನ್ ಆಗಿ ಆ ಮಹಿಳೆ ಈ ಸೂಟ್ ಕೇಸ್ ನಲ್ಲಿ ನನ್ನ ತಾಯಿಯ ಡೆಡ್ ಬಾಡಿ ಇದೆ. ನಾನೇ ಕೊಂದಿದ್ದು ಎಂದು ಹೇಳಿದ್ದಾಳೆ. ಇದನ್ನು ಕೇಳಿದ ಪೊಲೀಸರಿಗೆ ಒಂದು ಸೆಕೆಂಡ್ ಶಾಕ್ ಆಗಿ ಹೋಯ್ತು. ಸೂಟ್ ಕೇಸ್ ತೆಗೆದಾಗ ನಿಜಕ್ಕೂ ಅದರಲ್ಲಿ 70 ವರ್ಷದ ವೃದ್ದೆಯೊಬ್ಬಳ ಶವವಿತ್ತು.
ಹೌದು ಇದು ಫಿಲ್ಮಿ ಸ್ಟೋರಿ ತರ ಅನ್ನಿಸಿದ್ರು, ನೈಜ ಘಟನೆ. ಮೂಲತಹ ಕೋಲ್ಕತ್ತಾ ನಿವಾಸಿ ಸೋನಾಲಿ ತನ್ನ ತಾಯಿ ಬೀವಾ ಪಾಲ್ ಎನ್ನುವವಳನ್ನ್ ಕೊಲೆ ಮಾಡಿದ್ದಾಳೆ. ಅಸಲಿಗೆ ಸೋನಾಲಿಗೆ ಒಬ್ಬ ಮಗ ಇದ್ದಾನೆ. ಅವನು ಮಾನಸಿಕ ತೊಂದರೆಯಿಂದ ಬಳಲುತ್ತಿದ್ದಾನೆ. ಒಂದೇ ಮನೆಯಲ್ಲಿ ಸೋನಾಲಿ ಗಂಡನ ತಾಯಿ ಹಾಗೂ ತನ್ನ ಸ್ವಂತ ತಾಯಿ ಇದ್ದರು. ಪ್ರತಿದಿನ ಅತ್ತೆ ಹಾಗೂ ತಾಯಿ ಜಗಳವಾಡ್ತಾ ಇದ್ದರು. ಇದರಿಂದ ಸೋನಾಲಿ ಮಾನಸಿಕವಾಗಿ ಕುಗ್ಗಿ ಹೋಗಿದ್ದಳು.
ಮನಗ ಮಾನಸಿಕ ಕಾಯಿಲೆ, ಮನೆಯಲ್ಲಿ ಸದಾ ಜಗಳದಿಂದ ಬೇಸತ್ತಿದ್ದಳು. ಸೋನಾಲಿ ತಂದೆ ಮೂರು ವರ್ಷಗಳ ಹಿಂದೆ ಸಾವನ್ನಪ್ಪಿದ್ದರು. ಇಂದು ಬೆಳಗ್ಗೆ ತಾಯಿಗೆ 20 ನಿದ್ರೆ ಮಾತ್ರೆ ಕೊಟ್ಟಿದ್ದಾಳೆ. ನಂತರ ಮನೆಯಲ್ಲಿ ಎಲ್ಲರೂ ಇದ್ದಾಗಲೇ ಬೇರೆ ಕೋಣೆಯಲ್ಲಿ ತಾಯಿಯನ್ನ ವೇಲ್ ನಿಂದ ಬಿಗಿದಿ ಸಾಯಿಸಿದ್ದಾಳೆ. ನಂತರ ಸೂಟ್ ಕೇಸ್ ನಲ್ಲಿ ಡೆಡ್ ಬಾಡಿ ಹಾಕಿ, ತಂದೆಯ ಫೋಟೊ ಇಟ್ತಿದ್ದಾಳೆ. ಇಷ್ಟೆಲ್ಲ ಮಾಡಿದರೂ ಮಗ ಹಾಗೂ ಅತ್ತೆಗೆ ವಿಷಯ ತಿಳಿದೇ ಇಲ್ಲ.
ನಂತರ ಉಬರ್ ಆಟೋ ಬುಕ್ ಮಾಡಿ ಸ್ಟೇಷನ್ ಗೆ ಸೂಟ್ ಕೇಸ್ ತಂದಿದ್ದಾಳೆ. ಸದ್ಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸೋನಾಲಿಯನ್ನ ಬಂಧಿಸಿದ್ದಾರೆ.