NTA ಯು NEET UG ಪರೀಕ್ಷೆ 2023 ರ ಫಲಿತಾಂಶ ಬಿಡುಡೆಯಾಗಿದ್ದು, ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಫಲಿತಾಂಶವನ್ನು ಪರಿಶೀಲಿಸಬಹುದು. neet.nta.nic.in, ntaresults.nic.in ಗೆ ಭೇಟಿ ನೀಡಿ ಫಲಿತಾಂಶ ನೋಡಬಹುದು.
ತಮಿಳುನಾಡಿನ ಪ್ರಬಂಜನ್ ಜೆ ಮತ್ತು ಆಂಧ್ರಪ್ರದೇಶದ ಬೋರಾ ವರುಣ್ ಚಕ್ರವರ್ತಿ ಅವರು ನೀಟ್ ಪರೀಕ್ಷೆಯಲ್ಲಿ ಶೇ. 99.99 ಅಂಕಗಳೊಂದಿಗೆ ಅಗ್ರಸ್ಥಾನ ಗಳಿಸಿದ್ದಾರೆ ಎನ್ನಲಾಗಿದೆ. ಪರೀಕ್ಷೆಯಲ್ಲಿ ಒಟ್ಟು 20.38 ಲಕ್ಷ ಅಭ್ಯರ್ಥಿಗಳ ಪೈಕಿ 11.45 ಲಕ್ಷ ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. ಉತ್ತರ ಪ್ರದೇಶದಲ್ಲಿ ಗರಿಷ್ಠ 1.39 ಲಕ್ಷ, ಮಹಾರಾಷ್ಟ್ರದಲ್ಲಿ 1.31 ಲಕ್ಷ ಮತ್ತು ರಾಜಸ್ಥಾನದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಆಂಧ್ರಪ್ರದೇಶದ ವರುಣ್ ಬೋರಾ NEET UG 2023 ಪರೀಕ್ಷೆಯಲ್ಲಿ ಅಗ್ರಸ್ಥಾನ ಗಳಿಸಿದ್ದಾರೆ. ವರುಣ್ ಶಾಲಾ ದಿನಗಳಿಂದಲೂ ಟಾಪರ್ ಆಗಿದ್ದು, ಆತನ ಸಾಧನೆಯಿಂದ ಕುಟುಂಬವಷ್ಟೇ ಅಲ್ಲ, ಶಿಕ್ಷಕರು, ಶಾಲಾ ಮಕ್ಕಳು ಸೇರಿದಂತೆ ಇಡೀ ಆಂಧ್ರಪ್ರದೇಶವೇ ಸಂತಸಗೊಂಡಿದೆ.
ಮಣಿಪುರವನ್ನು ಹೊರತುಪಡಿಸಿ, NEET UG ಪರೀಕ್ಷೆ 2023 ಅನ್ನು ಮೇ 7 ರಂದು ಆಯೋಜಿಸಲಾಗಿತ್ತು. ಮಣಿಪುರದ ಹಿಂಸಾಚಾರದ ಕಾರಣ, ಜೂನ್ 6 ರಂದು 11 ನಗರಗಳಲ್ಲಿ 8,753 ಅಭ್ಯರ್ಥಿಗಳಿಗೆ ಪರೀಕ್ಷೆಯನ್ನು ನಡೆಸಲಾಗಿತ್ತು. ತಾತ್ಕಾಲಿಕ ಆನ್ಸರ್ ಕೀಯನ್ನೂ ಬಿಡುಗಡೆ ಮಾಡಲಾಗಿದೆ. ಇದರೊಂದಿಗೆ ಅಭ್ಯರ್ಥಿಗಳ ಒಎಂಆರ್ ಪ್ರತಿ ಮತ್ತು ದಾಖಲಾದ ಪ್ರತಿಕ್ರಿಯೆ ಪತ್ರವನ್ನೂ ಬಿಡುಗಡೆ ಮಾಡಲಾಗಿದೆ.