Kornersite

Bollywood Entertainment Just In National Sandalwood

ಖ್ಯಾತ ಗಾಯಕಿ ಶಾರದಾ ರಾಜನ್ ಇನ್ನಿಲ್ಲ!


ಹಿರಿಯ ಗಾಯಕಿ ಮತ್ತು ಸಂಗೀತ ಸಂಯೋಜಕಿ ಶಾರದಾ ರಾಜನ್ 86ನೇ ವಯಸ್ಸಿನಲ್ಲಿ ಕ್ಯಾನ್ಸರ್ ಗೆ ಬಲಿಯಾಗಿದ್ದಾರೆ. 1966ರ ಸೂರಜ್ ಚಲನಚಿತ್ರದ ʼತಿತ್ಲಿ ಉಡಿʼ ಪೌರಾಣಿಕ ಗೀತೆಗೆ ಹೆಸರುವಾಸಿಯಾಗಿದ್ದ ಅವರು ಈಗ ಇಹಲೋಕ ತ್ಯಜಿಸಿದ್ದಾರೆ.

ಶಾರದಾ ರಾಜನ್ ಅಯ್ಯಂಗಾರ್ ಅವರು 25-10-1933 ರಂದು ತಮಿಳು ಕುಟುಂಬದಲ್ಲಿ ಜನಿಸಿದಳು. ನಟ ರಾಜ್‌ ಕಪೂರ್‌ ಅವರು ಶಾರದಾ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದರು. ರಾಜ್‌ ಕಪೂರ್‌ ಶಾರದಾ ಅವರನ್ನು ಸಂಗೀತ ನಿರ್ದೇಶಕರಾದ ಶಂಕರ್‌-ಜೈಕಿಶನ್‌ ಅವರಿಗೆ ಪರಿಚಯಿಸಿದ್ದರು. ಅಲ್ಲದೆ ಮೊಹಮ್ಮದ್‌ ರಫಿ ಅವರ ಜೊತೆ ಹಾಡಿದ ಮೊದಲ ಹಾಡಿಗೆ ಫಿಲ್ಮ್‌ ಫೇರ್‌ ಪ್ರಶಸ್ತಿಯನ್ನು ಪಡೆದಿದ್ದರು.

ಆ ಸಮಯದಲ್ಲಿ ಲತಾ ಮಂಗೇಶ್ಕರ್ ಮತ್ತು ಆಶಾ ಭೋಂಸ್ಲೆ ಹೆಚ್ಚಾಗಿ ಹಾಡುಗಳಿಗೆ ಧ್ವನಿ ನೀಡುತ್ತಿದ್ದರು. ಶಾರದಾ ಅವರ ಅಸಾಂಪ್ರದಾಯಿಕ ಧ್ವನಿ ಕೇಳುಗರ ಮನಗೆದ್ದಿತ್ತು. ಅವರು ಆನ್ ಈವ್ನಿಂಗ್ ಇನ್ ಪ್ಯಾರಿಸ್, ಅರೌಂಡ್ ದಿ ವರ್ಲ್ಡ್, ಗುಮ್ನಾಮ್, ಸಪ್ನೋ ಕಾ ಸೌದಾಗರ್ ಮತ್ತು ಕಲ್ ಆಜ್ ಔರ್ ಕಲ್ ಮುಂತಾದ ಚಿತ್ರಗಳಲ್ಲಿ ಹಾಡಿದ್ದಾರೆ. ರು ವೈಜಯಂತಿಮಾಲಾ, ಮುಮ್ತಾಜ್, ರೇಖಾ, ಶರ್ಮಿಳಾ ಟ್ಯಾಗೋರ್ ಮತ್ತು ಹೇಮಾ ಮಾಲಿನಿಯಂತಹ ನಟಿಯರಿಗೆ ಧ್ವನಿಯಾಗಿದ್ದರು.

70 ರ ದಶಕದಲ್ಲಿ, ಅವರು ತಮ್ಮ ಪಾಪ್ ಆಲ್ಬಂ ಅನ್ನು ಪ್ರಾರಂಭಿಸಿ, ಸಂಗೀತ ನಿರ್ದೇಶನಕ್ಕೆ ಮುಂದಾಗಿದ್ದರು. ಶಾರದಾ ರಾಜನ್ 1960 ಮತ್ತು 70 ರ ದಶಕದಲ್ಲಿ ಜನಪ್ರಿಯ ಹೆಸರು. ಗಾಯಕ ಮೊಹಮ್ಮದ್ ರಫಿ, ಆಶಾ ಭೋಂಸ್ಲೆ, ಕಿಶೋರ್ ಕುಮಾರ್ ಮತ್ತು ಮುಖೇಶ್ ಅವರಂತಹ ಎಲ್ಲಾ ಸಂಗೀತ ಮಾಂತ್ರಿಕರೊಂದಿಗೆ ಅವರು ಕೆಲಸ ಮಾಡಿದ್ದಾರೆ.

You may also like

Entertainment Gossip Mix Masala

ಆಸ್ಕರ್ ಇವೆಂಟ್ ನಲ್ಲಿ ಭಾಗವಹಿಸಲು ಹಣದ ಹೊಳೆಯನ್ನೇ ಹರಿಸಿರುವ ರಾಜಮೌಳಿ ಹಾಗೂ ತಂಡ

ಸ್ಟಾರ್ ನಿರ್ದೇಶಕ ರಾಜಮೌಳಿ ಅವರ ಶ್ರಮದಿಂದಾಗಿ ಭಾರತಕ್ಕೆ ಆಸ್ಕರ್ ಪ್ರಶಸ್ತಿ ಬರುವಂತಾಗಿದೆ. ಆರ್ ಆರ್ ಆರ್ ಚಿತ್ರದ ನಾಟು ನಾಟು ಹಾಡು ಆಸ್ಕರ್ ಪ್ರಶಸ್ತಿ ಗೆದ್ದುಕೊಂಡಿದೆ. ಆದರೆ,
National

ರಾಮಲೀಲಾ ಮೈದಾನದಲ್ಲಿ ಜಮಾಯಿಸುತ್ತಿರುವ ರೈತರು

ನವದೆಹಲಿ : ದೇಶದ ಬೇರೆ ಬೇರೆ ರಾಜ್ಯಗಳಿಂದ ರೈತರು ಇಂದು ದೆಹಲಿಯಲ್ಲಿ ಜಮಾಯಿಸುತ್ತಿದ್ದಾರೆ. ವಿವಿಧ ರೈತ ಸಂಘಟನೆಗಳ ಯುನೈಟೆಡ್ ಕಿಸಾನ್ ಮೋರ್ಚಾ (ಎಸ್‌ಕೆಎಂ) ಕೃಷಿ ಉತ್ಪನ್ನಗಳ ಕನಿಷ್ಠ