ಮಗು ಹುಟ್ಟಿ ಇನ್ನು ಮೂರು ದಿನ ಕೂಡ ಕಳೆದಿರಲಿಲ್ಲ. ಮಗುವಿನ ಬಗ್ಗೆಯೂ ಚಿಂತಿಸದೇ ಹೆತ್ತವರು ತಬ್ಬಲಿ ಮಾಡಿದ್ದಾರೆ. ಆಗಷ್ಟೇ ಕಣ್ಣು ಬಿಟ್ತಿದ್ದ ಕಂದಮ್ಮ ಬದುಕುಳಿದಿದ್ದೇ ಪವಾಡ. ಯಾಕೆಂದ್ರೆ ಕೊಳೆತ ಶವಗಳ ಮಧ್ಯೆ ಮೂರು ದಿನಗಳ ಕಾಲ ಬದುಕುಳಿದಿದೆ ಹಸುಗೂಸು. ಈ ಘಟನೆ ನಡೆದಿರೋದು ಉತ್ತರಾಖಂಡ್ ನ ರಾಜಧಾನಿ ಡೆಹ್ರಾಡೂನ್ ನಲ್ಲಿ.
ಸಾಲದಿಂದ ಕೆಂಗಟ್ಟಿದ್ದ ತಂದೆ ಕಸೀಫ್ ಹಾಗೂ ತಾಯಿ ಅನಾಂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜೂನ್ 8 ರಂದು ಅನಾಂ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಇದಾದ ಮೂರೇ ದಿನಕ್ಕೆ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯನ್ನ ಒಳಗಿನಿಂದ ಲಾಕ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂರು ದಿನಗಳ ನಂತರ ಮನೆ ಒಳಗಿನಿಂದ ಕೊಳೆತ ವಾಸನೆ ಬರುವುದನ್ನ ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.
ಪೊಲೀಸರು ಬಂದು ಮನೆ ಬಾಗಿಲನ್ನು ತೆರೆದು ನೋಡಿದಾಗ ಇಬ್ಬರ ಶವ ಪತ್ತೆಯಾಗಿದೆ. ಇನ್ನೊಂದು ಆಶ್ಚರ್ಯ ಅಂದ್ರೆ ಶವಗಳ ಪಕ್ಕದಲ್ಲಿಯೇ ಐದು ದಿನಗಳ ಕಂದಮ್ಮ ಜೀವಂತವಾಗಿ ಪತ್ತೆಯಾಗಿದೆ. ಕೂಡಲೇ ಮಗುವನ್ನು ಸ್ಥಳೀಯ ಆಸ್ಪತ್ರೆಗೆ ಕಳುಹಿಸಿದ್ದಾರೆ.
ತನ್ನದಲ್ಲದ ತಪ್ಪಿಗೆ ಆ ಕಂದಮ್ಮ ಮೂರು ದಿನ ನರಕ ಅನುಭವಿಸಿದೆ. ಏನನ್ನೂ ಅರಿಯದ ಕಂದಮ್ಮನ ಭವಿಷ್ಯ ಏನಾಗುತ್ತೆ,ಹೇಗೆ ಬದುಕುತ್ತೆ ಅನ್ನುವ ಪರಿಜ್ನಾನ ಇಲ್ಲದೇ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದು ನಿಜಕ್ಕೂ ದುರಂತ.