ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರ್ಗಿ ವಿರುದ್ಧ ಬೆಂಗಳೂರಿನ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ಸುಳ್ಳು ದೂರು ಸಲ್ಲಿಸಿ ವಂಚನೆ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಪ್ರಶಾಂತ್ ಸಂಬರಗಿ ವಿರುದ್ಧ ಸೆಕ್ಷನ್ 420 ಅಡಿ ಪ್ರಕರಣ ದಾಖಲಾಗಿದೆ. ಸಂಬರ್ಗಿ ಹತ್ತಿರ ಉದ್ಯಮಿ ದೇವನಾತ್ ವೈಕ್ಯೆ ಎಂಬುವವರು 2017ರ ಜುಲೈನಲ್ಲಿ ಮನೆ ದಾಖಲೆ, ಚೆಕ್ ನ್ನು ಶ್ಯೂರಿಟಿ ಇಟ್ಟು ಸಾಲ ಪಡೆದಿದ್ದರು. ನಂತರ ಅದೇ ವರ್ಷ ಡಿಸೆಂಬರ್ ನಲ್ಲಿ ಸಾಲ ತೀರಿಸಿದ್ದರು. ಆದರೆ, ಸಂಬರ್ಗಿ ಹೆಚ್ಚಿನ ಬಡ್ಡಿ ನೀಡಬೇಕೆಂದು ಮನೆ ದಾಖಲೆ ನೀಡದೆ ಸತಾಯಿಸಿದ್ದಲ್ಲದೇ, ಪೊಲೀಸ್ ಠಾಣೆಯಲ್ಲಿ ದೇವನಾತ್ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದರು. ಹೀಗಾಗಿ ಸುಳ್ಳು ದೂರು ಸಲ್ಲಿಸಿದ್ದಕ್ಕೆ ಎಫ್ ಐಆರ್ ದಾಖಲಾಗಿದೆ.