ಗೃಹ ಲಕ್ಷ್ಮೀ ಯೋಜನೆ ಅಡಿಯಲ್ಲಿ ಮನೆಯ ಯಜಮಾನಿಗೆ ಎರಡು ಸಾವಿರ ರೂಪಾಯಿ ಹಣ ಸಿಗಲಿದೆ. ಆದರೆ ಹಲವು ಜನರಿಗೆ ಈ ಯೋಜನೆಯನ್ನ್ ಹೇಗೆ ಪಡೆಯುವುದು ಎನ್ನುವುದರ ಬಗ್ಗೆ ಗೊಂದಲವಿದೆ. ಈ ಗೊಂದಲ ಬಗೆಹರಿಸಿಕೊಳ್ಳಲು ವಿಡಿಯೋವನ್ನ ಕೊನೆವರೆಗೂ ನೊಡಿ. ಬಿಪಿಎಲ್ ಕಾರ್ಡ್, ಎಪಿಎಲ್ ಕಾರ್ಡ್ ಇರುವವರು ಹಾಗೂ ಅಂತೋದಯ ಕಾರ್ಡ್ ಇರುವವರು ಈ ಯೋಜನೆಯ ಲಾಭ ಪಡೆಯಬಹುದಾಗಿದೆ. ಅರ್ಜಿದಾರರು ಅರ್ಜಿಯನ್ನ ನಾಳೆ ಅಂದರೆ ಜೂನ್ 16 ರಿಂದ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಯಾವುದೇ ಕೊನೆಯ ದಿನಾಂಕವಿಲ್ಲ. ಅರ್ಜಿಗಳನ್ನು ಆನ್ ಲೈನ್ ಹಾಗೂ ಖುದ್ದು ನೇರವಾಗಿ ಹೋಗಿ ಸಲ್ಲಿಸಬಹುದು. ಗ್ರಾಮ್ ಒಬ್, ಬೆಂಗಳೂರು ಒನ್, ಕರ್ನಾಟಕ ಒನ್ ಕೇಂದ್ರಗಳಲ್ಲಿ ಹಾಗೂ
ಸೇವಾ ಸಿಂಧು ಪೋರ್ಟ್ ಲ್ ಮೂಲಕ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಹೋಗುವಾಗ ಅರ್ಜಿದಾರರ ಆದಾರ್ ಕಾರ್ಡ್, ಪತಿಯ ಆಧಾರ ಕಾರ್ಡ್ ತೆಗೆದುಕೊಂಡು ಹೋಗಬೇಕು. ಆದಾರ್ ಕಾರ್ಡ್ ಲಿಂಕ್ ಇರುವ ಮೊಬೈಲ್ ತೆಗೆದುಕೊಂಡು ಹೋಗಬೇಕು. ಅರ್ಜಿ ಮಂಜೂರಾದ ನಂತರ ಹಣವನ್ನ್ ನೇರವಾಗಿ ನಿಮ್ಮ ಅಕೌಂಟ್ ಗೆ ಹಾಕಲಾಗುತ್ತೆದೆ.
ಅರ್ಜಿ ಸಲ್ಲಿಕೆಗೆ ಯಾವುದೇ ರೀತಿಯ ಫೀಸ್ ಅಥವಾ ಶುಲ್ಕ ಕೊಡಬೇಕಾಗಿಲ್ಲ. ಉಚಿತವಾಗಿ ಅರ್ಜಿ ಸಲ್ಲಿಸಬಹುದು. ಮಧ್ಯವರ್ತಿಗಳ ಹಾವಳಿ ತಪ್ಪಿಸಲು ನೇರವಾಗಿ ಹೋಗಿ ಅರ್ಜಿ ಸಲ್ಲ್ಲಿಸಬಹುದು.