Kornersite

Bengaluru Just In Karnataka State

ಕರ್ನಾಟಕ ಸಿಇಟಿ ಫಲಿತಾಂಶ ಪ್ರಕಟ; ಎಂದಿನಂತೆ ಬಾಲಕಿಯರ ಮೇಲುಗೈ!

ಬೆಂಗಳೂರು: 2023-24ನೇ ಸಾಲಿನ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ-ಸಿಇಟಿ ಫಲಿತಾಂಶ (KCET Results 2022) ಪ್ರಕಟವಾಗಿದೆ.

ಉನ್ನತ ಶಿಕ್ಷಣ ಸಚಿವ ಡಾ.ಸುಧಾಕರ್ ಅವರು ಬೆಂಗಳೂರಿನ ಮಲ್ಲೇಶ್ವರಂನ ಕೆಇಎ ಕಚೇರಿಯಲ್ಲಿ ಸಿಇಟಿ ಫಲಿತಾಂಶ ಪ್ರಕಟಿಸಿದ್ದಾರೆ. ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಇಂಜಿನಿಯರಿಂಗ್ ಕೋರ್ಸ್ಗೆ- 2,03,381 ವಿದ್ಯಾರ್ಥಿಗಳು ಆಯ್ಕೆಯಾಗಿದ್ದರೆ, ಕೃಷಿ ವಿಜ್ಞಾನ ಕೋರ್ಸಿಗೆ- 1,64,187, ಪಶುಸಂಗೋಪನೆ- 166756, ಯೋಗ ಮತ್ತು ನ್ಯಾಚುರೋಪತಿಗೆ- 2,06191, ಬಿ.ಪಾರ್ಮ್ ಮತ್ತು ಡಿ.ಪಾರ್ಮ್ ಕೋರ್ಸ್ ಗೆ- 2,06,340, ನರ್ಸಿಂಗ್ ಕೋರ್ಸಿಗೆ – 1,66,808 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ ಎಂದು ಸಚಿವ ಡಾ.ಸುಧಾಕರ್ ಮಾಹಿತಿ ನೀಡಿದ್ದಾರೆ.

ಇಂಜಿನಿಯರಿಂಗ್ ವಿಭಾಗದಲ್ಲಿ ವಿಘ್ನೇಶ್ ಟಾಪರ್‌ ಆಗಿದ್ದಾರೆ. ಅರ್ಜುನ್ ಕೃಷ್ಣಸ್ವಾಮಿ ದ್ವಿತೀಯ, ತೃತೀಯ ಸ್ಥಾನವನ್ನು ಮೃದ್ಧ್ ಶೆಟ್ಟಿ ಹಾಗೂ ಎಸ್.ಸುಮೇಧ್ಗೆ 4ನೇ ಸ್ಥಾನ ಪಡೆದುಕೊಂಡಿದ್ದಾರೆ. ಮಾಧವ ಸೂರ್ಯಗೆ 5ನೇ ಸ್ಥಾನ ಲಭಿಸಿದೆ. ವಿಗ್ನೇಶ್ ನಾಟರಾಜ್ ಕುಮಾರ್ ಕ್ವಾಲಿಫೈ ಪರೀಕ್ಷೆಯಲ್ಲಿ 99.667 ಅಂಕ ಕಳಿಸಿದ್ದು, ಸಿಟಿಇಯಲ್ಲಿ 96.111 ಅಂಕ ಪಡೆಯುವುದರೊಂದಿಗೆ ಒಟ್ಟು 97.111 ಪರ್ಸೆಂಟೇಜ್ ಮಾಡಿದ್ದಾರೆ.
ನ್ಯಾಚೂರೋಪತಿ ಹಾಗೂ ಯೋಗದಲ್ಲಿ ಪ್ರತೀಕ್ಷಾ ಟಾಪ್ ಆಗಿದ್ದಾರೆ. karresults.nic.in ಹಾಗೂ cetonline.karnataka.gov.in ವೆಬ್ಸೈಟ್ನಲ್ಲಿ ಫಲಿತಾಂಶ ನೋಡಬಹುದು.

You may also like

Crime Karnataka State

ಕೊಲೆಯಲ್ಲಿ ಅಂತ್ಯವಾದ ವ್ಹೀಲಿಂಗ್ ಗಲಾಟೆ

ಹಾಸನ : ವ್ಹೀಲಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜಿಲ್ಲೆಯ ಗವೇನಹಳ್ಳಿಯಲ್ಲಿ ನಡೆದಿದೆ.ಘಟನೆಯಲ್ಲಿ ಆಟೋ ಚಾಲಕ ಸುಮಂತ್ (20) ಕೊಲೆಯಾದ ದುರ್ದೈವ ಯುವಕ.
Bengaluru State

ಬೈಕ್, ಟ್ಯಾಕ್ಸಿ ಬಂದ್ ಮಾಡುವಂತೆ ಆಗ್ರಹಿಸಿ ಮುಷ್ಕರ!

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ವೈಟ್ ಬೋರ್ಡ್ ಬೈಕ್‌ ಟ್ಯಾಕ್ಸಿಗಳನ್ನು ಬಂದ್ ಮಾಡುವಂತೆ ಆಗ್ರಹಿಸಿ ಆಟೋ ಚಾಲಕರು ಹಾಗೂ ಸಂಘಟನೆಗಳು ಭಾನುವಾರ ಮಧ್ಯರಾತ್ರಿಯಿಂದ ಸೇವೆ ಸ್ಥಗಿತಗೊಳಿಸಿ ಮುಷ್ಕರ