ಅಭಿಷೇಕ್ ಅಂಬರೀಶ್- ಅವಿವಾ (Aviva) ಮದುವೆಯ ಬೀಗರೂಟ ಕಾರ್ಯಕ್ರಮಕ್ಕೆ ಮಂಡ್ಯಕ್ಕೆ ತೆರಳಿದ್ದಾರೆ. ಇನ್ನೊಂದೆಡೆ ಮಂಡ್ಯದ ಜನರಿಗೆ ವೀಡಿಯೋ ಮೂಲಕ ಬೀಗರೂಟ ಕಾರ್ಯಕ್ರಮಕ್ಕೆ ಸುಮಲತಾ (Sumalatha ಅವರು ಆಹ್ವಾನಿಸಿದ್ದಾರೆ.
ಜೂನ್ 5ರಂದು ಅಭಿ- ಅವಿವಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಜೂನ್ 7ರಂದು ಅಭಿವಾ ಆರತಕ್ಷತೆಯನ್ನ ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ಕನ್ನಡ ಮಾತ್ರವಲ್ಲದೇ ಸೌತ್, ಬಾಲಿವುಡ್ ಸೂಪರ್ ಸ್ಟಾರ್ಸ್ ಆಗಮಿಸಿದ್ದರು. ಅಂಬಿ ಸ್ನೇಹ ವರ್ಗವೇ ಅಭಿಷೇಕ್ ವಿವಾಹ ಸಮಾರಂಭದಲ್ಲಿ ಸಾಕ್ಷಿಯಾದರು.
ಮಂಡ್ಯದ ಜನರಿಗೆ ಅಭಿವಾ ಮದುವೆಯ ಬೀಗರೂಟಕ್ಕೆ ಅದ್ದೂರಿಯಾಗಿ ಸಿದ್ಧತೆ ನಡೆದಿದೆ. ಅಷ್ಟೇ ಅಲ್ಲ, ಮಂಡದತ್ತ ನವಜೋಡಿ ತಮ್ಮ ಖಾಸಗಿ ಕಾರಿನಲ್ಲಿ ಹೊರಟಿದ್ದಾರೆ. ವಿಶಾಲವಾದ ಜಾಗದಲ್ಲಿ ಬೃಹತ್ ಜರ್ಮನ್ ಟೆಂಟ್ ಹಾಕಿ ಜನರು ಕುಳಿತು ಊಟ ಮಾಡಲು ವ್ಯವಸ್ಥೆ ಮಾಡಲಾಗಿದ್ದು, ಒಂದೇ ಬಾರಿಗೆ 4500 ಜನರು ಕುಳಿತು ಊಟ ಮಾಡಬಹುದಾಗಿದೆ.
ಮಂಡ್ಯ ಶೈಲಿಯಲ್ಲಿ ಬಾಡೂಟ ತಯಾರಾಗಿದ್ದು, 900 ಮಂದಿಯಿಂದ ಅಡುಗೆ ತಯಾರಿ ನಡೆದಿದೆ. 7 ಟನ್ ಮಟನ್, 8 ಟನ್ ಚಿಕನ್ ಬಳಸಿ ಭರ್ಜರಿ ಬಾಡೂಟವನ್ನು ಸಿದ್ಧಗೊಳಿಸಲಾಗುತ್ತಿದೆ. ರಾಗಿಮುದ್ದೆ, ಮಟನ್ ಬಿರಿಯಾನಿ, ಬೋಟಿ ಗೊಜ್ಜು, ನಾಟಿಕೋಳಿ ಸಾಂಬಾರ್, ಕಬಾಬ್, ಮೊಟ್ಟೆ, ರೈಸ್, ತಿಳಿ ಸಾಂಬಾರ್, ಬಾದುಶಾ, ಪಾಯಸ, ಬೀಡಾ, ಐಸ್‌ಕ್ರೀಂ, ಬಾಳೆಹಣ್ಣು ಬೀಗರೂಟಕ್ಕೆ ಬರುವವರಿಗಾಗಿ ತಯಾರಾಗಿದೆ.