ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ (England vs Australia) ನಡುವೆ ಇಂದಿನಿಂದ ಆ್ಯಶಸ್ ಟೆಸ್ಟ್ ಸರಣಿ ಆರಂಭವಾಗಿದೆ.
ಬರ್ಮಿಂಗ್‌ಹ್ಯಾಮ್ನ ಎಜ್‌ಬಾಸ್ಟನ್‌ನಲ್ಲಿ ಆರಂಭವಾಗುವ ಮೊದಲನೇ ಟೆಸ್ಟ್‌ನಲ್ಲಿ ಕಣಕ್ಕೆ ಇಳಿಯಲಿದೆ. 2021- 22ರ ಸರಣಿಯಲ್ಲಿ 4-0 ಅಂತರದ ಸೋಲಿಗೆ ಸೇಡು ತೀರಿಸಿಕೊಳ್ಳುವ ತವಕದಲ್ಲಿ ಇಂಗ್ಲೆಂಡ್ ಇದ್ದರೆ, 22 ವರ್ಷಗಳ ನಂತರ ಇಂಗ್ಲೆಂಡ್‌ನಲ್ಲಿ ತಮ್ಮ ಮೊದಲ ಆ್ಯಶಸ್ (Ashes 2023) ಗೆಲ್ಲುವ ಪ್ರಯತ್ನದಲ್ಲಿ ಆಸ್ಟ್ರೇಲಿಯಾ ಇದೆ.
1882 ರಲ್ಲಿ ಆರಂಭವಾದ ಈ ಟೆಸ್ಟ್ ಫೈಟ್ನಲ್ಲಿ ಇದುವರೆಗೆ 72 ಸರಣಿಗಳನ್ನು ಆಡಲಾಗಿದೆ. ಇದರಲ್ಲಿ 34 ಬಾರಿ ಆಸ್ಟ್ರೇಲಿಯಾ ತಂಡ ಗೆದ್ದರೆ, 32 ಬಾರಿ ಇಂಗ್ಲೆಂಡ್ ತಂಡ ಸರಣಿ ಗೆದ್ದಿದೆ. ಆ್ಯಶಸ್ಗಾಗಿ ಇಂಗ್ಲೆಂಡ್ ಕೆಲ ಅಚ್ಚರಿ ನಿರ್ಧಾರ ತೆಗೆದುಕೊಂಡಿದೆ. ಇಸಿಬಿ ಮೊಯೀನ್ ಅಲಿ ಅವರನ್ನು ಟೆಸ್ಟ್ ನಿವೃತ್ತಿಯಿಂದ ಹೊರ ಬರುವಂತೆ ಮನವಿ ಮಾಡಿತ್ತು. ಹೀಗಾಗಿ ಮೊಯೀನ್ ಈ ಬಾರಿ ಆ್ಯಶಸ್ ಸರಣಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಂಗ್ಲೆಂಡ್ ತಂಡದ ಕೀ ವೇಗಿಗಳಾದ ಜೇಮ್ಸ್ ಆಂಡರ್ಸನ್ ಮತ್ತು ಸ್ಟುವರ್ಟ್ ಬ್ರಾಡ್ ಕೂಡ ಆಡುತ್ತಿದ್ದಾರೆ. ಬೆನ್ ಡಕೆಟ್, ಒಲ್ಲಿ ಪೋಪ್, ಜೋ ರೂಟ್, ನಾಯಕ ಬೆನ್ ಸ್ಟೋಕ್ಸ್, ಜಾನಿ ಬೈರ್‌ಸ್ಟೋವ್ ತಂಡದಲ್ಲಿದ್ದಾರೆ. ಇಂಗ್ಲೆಂಡ್ ನೆಲದಲ್ಲಿ ಆಸ್ಟ್ರೇಲಿಯಾ ಯಶಸ್ಸು ಕಂಡಿಲ್ಲ. ಹೀಗಾಗಿ ಸುದೀರ್ಘ ಸಮಯದ ನಂತರ ಈ ಬಾರಿ ಸರಣಿ ಗೆದ್ದು ಅಭಿಮಾನಿಗಳಿಗೆ ಸಿಹಿ ಹಂಚಲು ಸಜ್ಜಾಗಿದೆ.