ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಅಕ್ಟೋಬರ್ ತಿಂಗಳಲ್ಲಿ ಆರಂಭವಾಗಲಿದೆ. ಆದರೆ, ಇದುವರೆಗೂ ವೇಳಾಪಟ್ಟಿ ಪ್ರಕಟವಾಗಿಲ್ಲ. ಭಾರತ ತಂಡದ ವಿರುದ್ಧ ಅಹ್ಮದಾಬಾದ್‌ನಲ್ಲಿ ಪಂದ್ಯ ಆಡಲು ಪಾಕ್ ಹಿಂದೇಟು ಹಾಕುತ್ತಿರುವುದೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.
ಭದ್ರತಾ ಕಾರಣಗಳಿಂದಾಗಿ ವಿಶ್ವದ ಬೃಹತ್ ಕ್ರಿಕೆಟ್ ಮೈದಾನದಲ್ಲಿ ಅ.15 ರಂದು ಆಡಲು ಪಾಕ್ ಹಿಂದೇಟು ಹಾಕುತ್ತಿದೆ. ಪಾಕ್ ತಂಡಕ್ಕೆ ಅಲ್ಲಿನ ವಿದೇಶಾಂಗ ಸಚಿವಾಲಯ ಇನ್ನೂ ಅನುಮತಿ ನೀಡಿಲ್ಲ. ಹೀಗಾಗಿ ವೇಳಾಪಟ್ಟಿ ಅಂತಿಮ ಗೊಳಿಸುವುದು ತಡವಾಗಿದೆ. ಒಂದು ವೇಳೆ ಅಹ್ಮದಾಬಾದ್‌ನಲ್ಲಿ ಪಂದ್ಯ ನಡೆಯದಿದ್ದರೆ ಕೋಲ್ಕತಾ ಅಥವಾ ಮುಂಬಯಿಗೆ ಸ್ಥಳಾಂತರಗೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಪಾಕಿಸ್ಥಾನವು ತನ್ನ ಇನ್ನುಳಿದ ಪಂದ್ಯಗಳನ್ನು ಬೆಂಗಳೂರು, ಹೈದರಾಬಾದ್, ಚೆನ್ನೈ, ಕೋಲ್ಕತಾದಲ್ಲಿ ಆಡಲಿದೆ. ಈ ಕುರಿತು ಪಿಸಿಬಿಗೆ ಐಸಿಸಿ ವಿಚಾರ ಮಾಡುವಂತೆ ಸಮಯ ನೀಡಿದೆ. ಒಂದು ವೇಳೆ ಪಾಕ್ ಒಪ್ಪಿದರೆ, ಐಸಿಸಿ ಪಾಕ್ ತಂಡಕ್ಕೆ ಅಹ್ಮದಾಬಾದ್ ನಲ್ಲಿ ಬಿಗಿ ಭದ್ರತೆ ಒದಗಿಸಬೇಕಾಗುತ್ತದೆ.