Kornersite

Just In Sports

ಜಗಳ ಆರಂಭಿಸಿದ್ದು ನಾನಲ್ಲ, ಕೊಹ್ಲಿ; ನವೀನ್!

ಐಪಿಎಲ್ ಪಂದ್ಯದ ವೇಳೆ ಕಿಂಗ್ ಕೊಹ್ಲಿ ಹಾಗೂ ಲಕ್ನೋ ಸೂಪರ್ ಜೈಂಟ್ಸ್‌ ನ ನವೀನ್-ಉಲ್-ಹಕ್ ಮಧ್ಯೆ ತೀವ್ರ ವಾಗ್ದಾಳಿ ನಡೆದಿತ್ತು.
ಈ ಸಂದರ್ಭದಲ್ಲಿ ಲಕ್ನೋ ತಂಡದ ಮೆಂಟರ್ ಗೌತಮ್ ಗಂಭೀರ್ ಕೂಡ ಕೊಹ್ಲಿಯೊಂದಿಗೆ ವಾಗ್ವಾದ ನಡೆಸಿದ್ದರು. ಈಗ ಘಟನೆಯ ವಿವರವನ್ನು ನವೀನ್ ನೀಡಿದ್ದಾರೆ.

ಮ್ಯಾಚ್ ಮುಗಿದ ಬಳಿಕ ಹಸ್ತಲಾಘವ ಮಾಡುವ ಸಂದರ್ಭದಲ್ಲಿ ವಿರಾಟ್ ಕೊಹ್ಲಿಯೇ ಜಗಳ ಆರಂಭಿಸಿದ್ದರು. ನಾನು ಯಾರೊಂದಿಗೆ ಇದುವರೆಗೂ ಜಗಳ ಮಾಡಿಲ್ಲ. ಆದರೆ, ನನ್ನನ್ನು ಯಾರಾದರೂ ಬೈದರೆ ಖಂಡಿತವಾಗಿಯೂ ಸುಮ್ಮನಿರುವುದಿಲ್ಲ. ಅದು ದೊಡ್ಡ ಅಥವಾ ಸಣ್ಣ ಆಟಗಾರನಾಗಿರಲಿ. ನನ್ನನ್ನು ಬೈದರೆ ನಾನು ಸುಮ್ಮನಿರಲ್ಲ” ಎಂದು ನವೀನ್ ಹೇಳಿದ್ದಾರೆ.

ವಿರಾಟ್’ಗೆ ಶೇಖ್ ಹ್ಯಾಂಡ್ ಕೊಟ್ಟು ನಾನು ಮುಂದೆ ನಡೆದೆ, ಆದರೆ ಅವರು ನನ್ನ ಕೈ ಬಿಡದಿರುವ ಕಾರಣ ನನಗೆ ಕೋಪ ಬಂತು. ನಾನು ನನ್ನ ಕೈಯನ್ನು ಎಳೆದೆ. ಏಕೆಂದರೆ ನಾನು ಕೂಡ ಮನುಷ್ಯ. ನನಗೂ ಕೋಪ ಬರುತ್ತೆ. ಆದರೆ ಆ ಬಳಿಕ ಘಟನೆಗೆ ಬೇರೆಯೇ ಅರ್ಥ ಕಲ್ಪಿಸಿ, ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು” ಎಂದು ಹೇಳಿದ್ದಾರೆ. ನಾನು ಮಾವಿನ ಹಣ್ಣನ್ನು ಸವಿಯುತ್ತಿದ್ದೆ. ಅದರ ಫೋಟೋ ಶೇರ್ ಮಾಡಿದ್ದೆ ಅಷ್ಟೇ. ಅದನ್ನು ತಪ್ಪಾಗಿ ಬಿಂಬಿಸಲಾಗಿದೆ ಎಂದು ಹೇಳಿದ್ದಾರೆ.

You may also like

Sports

ಡಿವೈನ್ ಭರ್ಜರಿ ಆಟಕ್ಕೆ ಮಂಕಾದ ಜೈಂಟ್ಸ್!

ಮುಂಬಯಿ : ಆಲ್‌ ರೌಂಡರ್‌ ಸೋಫಿ ಡಿವೈನ್‌ ಭರ್ಜರಿ ಆಟಕ್ಕೆ ಗುಜರಾತ್ ಜೈಂಟ್ಸ್ ತಂಡವು ಸೋಲು ಒಪ್ಪಿಕೊಳ್ಳುವಂತಾಯಿತು.ಗುಜರಾತ್‌ ಜೈಂಟ್ಸ್‌ ವಿರುದ್ಧ ಆರ್ ಸಿಬಿ 8 ವಿಕೆಟ್‌ ಗಳ
Sports

ಮಾಜಿ ಕ್ರಿಕೆಟಿಗ ಸಲೀಂ ದುರಾನಿ ಇನ್ನಿಲ್ಲ!

ನವದೆಹಲಿ : ಭಾರತೀಯ ಕ್ರಿಕೆಟ್ ತಂಡದ ಮಾಜಿ ಸ್ಟಾರ್ ಹಾಗೂ ಆಲ್ ರೌಂಡರ್ ಆಟಗಾರ ಸಲೀಂ ದುರಾನಿ ವಯೋಸಹಜ ಕಾಯಿಲೆಯಿಂದಾಗಿ ಸಾವನ್ನಪ್ಪಿದ್ದಾರೆ.1960ರ ದಶಕದಲ್ಲಿ ಭಾರತದ ಆಲ್ ರೌಂಡರ್