ಆನ್ ಲೈನ್ ನಲ್ಲಿ ಪ್ರತಿಯೊಬ್ಬರು ಬಟ್ಟೆ ಖರೀದಿಸುವಾಗ ಸೈಜ್ ಸಮಸ್ಯೆನ್ನು ಎದುರಿಸಿರುತ್ತಾರೆ. ಹೀಗಾಗಿ ಹಲವರು ಆನ್ ಲೈನ್ ಶಾಪಿಂಗ್ ನಿಂದ ದೂರವೇ ಉಳಿದಿರುತ್ತಾರೆ. ಆದರೆ ಇನ್ನು ಮುಂದೆ ಈ ಸಮಸ್ಯೆ ಆಗದಂತೆ ಗ್ರಾಹಕರು ವರ್ಚುವಲ್ ಟ್ರೈ ಮಾಡುವ ಅವಕಾಶ ಕಲ್ಪಿಸಲಾಗುತ್ತಿದೆ.
ಇದಕ್ಕಾಗಿ ಗೂಗಲ್ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಪರಿಚಯಿಸುತ್ತಿದೆ. ಗೂಗಲ್ ಆರ್ಟಿಪೀಶಿಯಲ್ ಇಂಟೆಲಿಜೆನ್ಸ್ ಮೂಲಕ ವರ್ಚುವಲ್ ಟ್ರೈ ಆನ್ ಟೂಲ್ ಅಭಿವೃದ್ಧಿಪಡಿಸಿದೆ. ಇದರ ಮೂಲಕ ಬಟ್ಟೆಗಳು ನಿಮಗೆ ಹೊಂದಿಕೆಯಾಗುತ್ತಾ ಎಂಬುವುದನ್ನು ಸುಲಭವಾಗಿ ಪರಿಶೀಲನೆ ಮಾಡಬಹುದು. ಗ್ರಾಹಕರು ನಿಮ್ಮ ಸೈಜ್, ಕಲರ್ ಸೇರಿದಂತೆ ಇತರ ಆಯ್ಕೆಗಳನ್ನು ಗಮನದಲ್ಲಿಟ್ಟು ಡ್ರೆಸ್ ಆಯ್ಕೆ ಮಾಡಿದರೆ ಸಾಕು. ಬಳಿಕ ವರ್ಚುವಲ್ ಟ್ರೈ ಆನ್ ಟೂಲ್ ಮೂಲಕ ಈ ಡ್ರೆಸ್ ನಿಮಗೆ ಹೇಗೆ ಕಾಣುತ್ತದೆ ಎಂಬುವುದನ್ನು ಪರಿಶೀಲನೆ ಮಾಡಬಹುದು.