ಶಿವಮೊಗ್ಗ: ವ್ಯಕ್ತಿಯೊಬ್ಬನ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿ ಥಳಿಸಿದ್ದರು. ಇದೇ ಘಟನೆಯಿಂದ ಮನನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನುವ ಮಾತು ಇದೀಗ ಕೇಳಿ ಬರುತ್ತಿದೆ. ಈ ಬಗ್ಗೆ ಯುವಕನ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾಳೆ.
ಶಿವಮೊಗ್ಗದ ಹೊಳೆಹೊನ್ನುರು ಗ್ರಾಮದ ಮಂಜುನಾಥ್ ಎನ್ನುವವನು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಂಜುನಾಥ್ ಆತ್ಮಹತ್ಯೆಗೆ ಪೊಲೀಸರೇ ಕಾರಣ. ಪೊಲೀಸರು ಸಾರ್ವಜನಿಕ ಸ್ಥಳದಲ್ಲಿ ಥಳಿಸಿದ್ದನ್ನ ಮನ್ನಸಿನಲ್ಲಿ ಇಟ್ಟುಕೊಂಡು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಮ್ದು ಆತನ ಪತ್ನಿ ದೂರನ್ನ ನೀಡಿದ್ದಾಳೆ.
ಏನಿದು ಪ್ರಕರಣ:
ಜೂನ್ 11ರಂದು ಮಂಜುನಾಥ್ ಹೊಳೆಹೊನ್ನುರು ಪಟ್ಟ ಪಂಚಾಯಿತಿ ಎದುರು ನಿಂತಿದ್ದನಂತೆ. ಏಕಾಏಕಿಯಾಗಿ ಬಂದ ಪೊಲೀಸರು ಆತನನ್ನ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಯಾವ ಕಾರಣಕ್ಕೆ ಥಳಿಸಿದ್ದರೆ ಅನ್ನೋದು ಮಾತ್ರ ನಿಗೂಡ. ಇದೇ ವಿಚಾರಕ್ಕೆ ಮಂಜುನಾಥ್ ಖಿನ್ನತೆಗೆ ಹೋಗಿದ್ದ. ಯಾರ ಬಳಿಯೂ ಮಾತನಾಡುತ್ತಿರಲಿಲ್ಲ.