ಪ್ರಧಾನಿ ನರೇಂದ್ರ ಮೋದಿ ಸಿರಿಧಾನ್ಯಗಳ ಬಗ್ಗೆ ಹಾಡನ್ನ ಬರೆದಿದ್ದಾರೆ. ಈ ಹಾಡಿನಲ್ಲಿ ಸಿರಿಧಾನ್ಯಗಳ ಮಹತ್ವವನ್ನು ತಿಳಿಸಲಾಗಿದೆ. ಈ ಹಾಡನ್ನು ಶುಕ್ರವಾರ ಬಿಡುಗಡೆ ಮಾಡಿದ್ದಾರೆ. ಈ ಹಾಡನ್ನು ಖುದ್ದು ಪ್ರಧಾನಿಯವರೇ ಬರೆದಿದ್ದು ವಿಶೇಷ.
ಈ ಹಾಡಿಗೆ ಭಾರತ ಮೂಲದ ಗ್ರ್ಯಾಮಿ ಪ್ರಶಸ್ತಿ ಪುರಸ್ಕೃತೆ ಫಾಲ್ಗುಣಿ ಶಾ ಹಾಗೂ ಅವರ ಪತಿ ಗಾಯಕ ಗೌರವ್ ಸಂಗೀತ ನೀಡಿ ಹಾಡಿದ್ದಾರೆ. ಹಾಗೂ ಪಾತ್ರ ವಹಿಸಿದ್ದಾರೆ. ಈ ಹಾಡು ಮೊದಲಿಗೆ ಹಿಮ್ದಿ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಬಿಡುಗಡೆಯಾಗಿದೆ. ಬಳಿಕ ಎಲ್ಲ ಭಾಷೆಗಳಿಗೂ ಅನುವಾದವಾಗಲಿದೆ ಎಮ್ದು ಫಾಲ್ಗುಣಿ ತಿಳಿಸಿದ್ದಾರೆ. ಇದರ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡ ಅವರು, ಕಳೆದ ವರ್ಷ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದಾಗ ಈ ವಿಷಯವನ್ನು ಪ್ರಸ್ತಾಪಿಸಿದರು. ಆಗ ತುಂಬಾನೇ ಖುಷಿ ಆಯಿತು. ಇದಕ್ಕೆ ನೀವೇ ಸಾಹಿತ್ಯ ಬರೆಯಬೇಕು ಎಮ್ದು ಕೇಳಿದ್ದೆ. ಅವರೊಂದಿಗೆ ಕೆಲಸ ಮಾಡಿ ಬಹಳ ಸಂತೋಷವಾಗಿತ್ತು ಎಂದು ಹೇಳಿದ್ದಾರೆ.