ಮಹತ್ವದ ಸೃಷ್ಟಿಯೊಂದು ಬೆಳಕಿಗೆ ಬಂದಿದ್ದು, ಇಂಗ್ಲೆಂಡ್‌ನ ಕೇಂಬ್ರಿಜ್ ವಿವಿಯ ಮ್ಯಾಗ್ಡಲೆನಾ ಗೋಯೆಜ್ ಅವರು ಕ್ಯಾಲಿಫೋರ್ನಿಯ ತಾಂತ್ರಿಕ ಸಂಸ್ಥೆಯೊಂದಿಗೆ ಸೇರಿಕೊಂಡು ವಿಶೇಷ ಜೀವಕೋಶಗಳನ್ನು ಬಳಸಿ ಕೃತಕ ಮನುಷ್ಯನ ಭ್ರೂಣಕೋಶ ಸೃಷ್ಟಿಸಿದ್ದಾರೆ.
ಇವು ಮನುಷ್ಯನ ಭ್ರೂಣಕೋಶಗಳಲ್ಲವಾದರೂ, ಅವನ್ನೇ ಹೋಲುವ ಕೃತಕ ರೂಪಗಳು. ಮಾಮೂಲಿ ಭ್ರೂಣಕೋಶಗಳ ಹಲವು ಲಕ್ಷಣಗಳನ್ನು ಹೊಂದಿವೆ. ಈ ವಿಚಾರ ಇತ್ತೀಚೆಗೆ ಅಮೆರಿಕದ ಬೋಸ್ಟನ್‌ನಲ್ಲಿ ನಡೆದ ಇಂಟರ್‌ನ್ಯಾಷನಲ್ ಸೊಸೈಟಿ ಫಾರ್ ಸ್ಟೆಮ್ ಸೆಲ್ ರೀಸರ್ಚ್ ಸಭೆಯಲ್ಲಿ ಬಹಿರಂಗವಾಗಿದೆ.
ಪ್ರೊಫೆಸರ್ ಮ್ಯಾಗ್ಡಲೆನಾ ಗೋಯೆಜ್ ಬಹಿರಂಗ ಪಡಿಸಿದ್ದೇ ತಡ ಹಲವು ರೀತಿಯ ಚರ್ಚೆಗಳು ಶುರುವಾಗಿವೆ. ಮನುಷ್ಯನ ಒಂದೇ ಒಂದು ವಿಶೇಷ ಜೀವಕೋಶವನ್ನು ಬಳಸಿ ಕೃತಕ ಭ್ರೂಣಕೋಶಗಳನ್ನು ಸಿದ್ಧಪಡಿಸಲಾಗಿದೆ. ಇದಕ್ಕೆ ಗ್ಯಾಸ್ಟ್ರಿಕು ಲೇಶನ್ ಎಂಬ ಪದ್ಧತಿ ಬಳಸಲಾಗಿದೆ. ಪ್ರಯೋಗಾಲಯದಲ್ಲಿ ಭ್ರೂಣವನ್ನು ಬೆಳೆಸಲು 14 ದಿನಗಳ ಸಮಯವನ್ನು ನಿಗದಿಪಡಿಸಲಾಗಿದೆ. ಇದಕ್ಕಿಂತ ಹೆಚ್ಚಿನ ಅವಧಿ ಯಾವುದೇ ಭ್ರೂಣ ಬದುಕಿರಲು ಸಾಧ್ಯವಿಲ್ಲ ಎನ್ನುವುದೇ ಇದಕ್ಕೆ ಕಾರಣ. ಅಂಡಾಣು ಹುಟ್ಟಿ ಬೆಳೆದು ಗರ್ಭಕೋಶವನ್ನು ಸೇರಿಕೊಳ್ಳುವ ಅವಧಿಯೂ ಇಷ್ಟೇ ಆಗಿದೆ.
ಇತ್ತೀಚೆಗೆ ಸ್ತ್ರೀಯರಿಗೆ ಗರ್ಭಪಾತ ಹೆಚ್ಚಾಗುತ್ತಿದ್ದು, ಈ ಕೃತಕ ಭ್ರೂಣಗಳ ಬೆಳವಣಿಗೆಯ ಮೂಲಕ ತಿಳಿಯಬಹುದು. ಇವುಗಳ ಸೃಷ್ಟಿಗೆ ಅಂಡಾಣು-ವೀರ್ಯಾಣುವಿನ ಅಗತ್ಯವಿಲ್ಲವಾದರೂ, ಮನುಷ್ಯನ ಜೀವಕೋಶಗಳಿಂದಲೇ ಸಿದ್ಧಪಡಿಸಬೇಕು.