ಆರ್ ಬಿಐ ಮುದ್ರಿಸಿದ್ದ 500 ರೂ. ಮುಖ ಬೆಲೆಯ ಸುಮಾರು 8,810.65 ಮಿಲಿಯನ್ ನೋಟುಗಳೇ ನಾಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಈ ಕುರಿತು ಆರ್ ಟಿಐ ಕಾರ್ಯಕರ್ತರೊಬ್ಬರು ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದು, ದೇಶದ ಮೂರು ವಿವಿಧ ನೋಟು ಮುದ್ರಣಾಲಯದಲ್ಲಿ ಮುದ್ರಿಸಲಾದ 500 ರೂ ನೋಟುಗಳ ಸಂಖ್ಯೆ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಸ್ವೀಕರಿಸಿದ ಸಂಖ್ಯೆಗಳ ಮಧ್ಯೆ ವ್ಯತ್ಯಾಸ ಇದೆ. ಸುಮಾರು 88 ಸಾವಿರ ಕೋಟಿ ರೂ. ನಷ್ಟು ನೋಟುಗಳು ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದೆ.
ಪಲಕ್ ಶಾ ಎಂಬ ಆರ್ ಟಿಐ ಕಾರ್ಯಕರ್ತ ಈ ಕುರಿತು ಟ್ವೀಟ್ ಮಾಡಿದ್ದು, ಇದು ನಿಜವೇ ಅಗಿದ್ದರೆ ದೇಶದ ಅತೀ ದೊಡ್ಡ ಪ್ರಮಾಣದ ರಾಬರಿ ಇದು…? ಸರ್ಕಾರಿ ಮುದ್ರಣಾಲಯಗಳಲ್ಲಿ ಮುದ್ರಿಸಿದ ಸುಮಾರು 8,810.65 ನೋಟುಗಳ ಪೈಕಿ 7260 ಮಿಲಿಯನ್ ನೋಟುಗಳು ಮಾತ್ರ ಆರ್ ಬಿಐ ಸ್ವೀಕರಿಸಿರುವುದಾಗಿ ಹೇಳಿದೆ. ಬಾಕಿ 1550 ಮಿಲಿಯನ್ 500 ಮುಖಬೆಲೆಯ ನೋಟುಗಳು ಏನಾದವು ಎಂದು ಪ್ರಶ್ನೆ ಮಾಡಿದ್ದಾರೆ.
ದೇಶದ ವಿವಿಧ ಮೂರು ಭಾರತೀಯ ಟಂಕಸಾಲೆಗಳು (ನೋಟು ಮುದ್ರಣಾಲಯಗಳು) ಹೊಸದಾಗಿ 8,810.65 ಮಿಲಿಯನ್ 500 ರೂ. ನೋಟುಗಳನ್ನು ಮುದ್ರಿಸಿಸಿ ಆರ್ಬಿಐಗೆ ನೀಡಿತ್ತಂತೆ. ಆದರೆ ಭಾರತೀಯ ರಿಸರ್ವ್ ಬ್ಯಾಂಕ್ ಕೇವಲ 7260 ಮಿಲಿಯನ್ ನೋಟುಗಳನ್ನು ಮಾತ್ರ ಸ್ವೀಕರಿಸಿದೆ ಎಂದು ವರದಿ ಹೇಳಿದೆ. ಮೂರು ನೋಟು ಮುದ್ರಣಾಲಯಗಳಿಂದ ಮುದ್ರಿಸಿದ ಒಟ್ಟು 8810.65 ಮಿಲಿಯನ್ ನೋಟುಗಳಲ್ಲಿ RBI ಕೇವಲ 7260 ಮಿಲಿಯನ್ ನೋಟುಗಳನ್ನು ಸ್ವೀಕರಿಸಿದೆ ಎಂದು ತಿಳಿದು ಬಂದಿದೆ.