ಸೂರತ್: ಇಂದು ವಿಶ್ವ ಅಪ್ಪಂದಿರ ದಿನ. ಮಕ್ಕಳು ತಮ್ಮ ಅಪ್ಪನಿಗೆ ವಿಶ್ ಮಾಡುವುದರ ಮೂಲಕ ಸ್ಟೇಟಸ್ ಗೆ ಫೋಟೋ ಹಾಕಿಕೊಂಡು ನಮ್ಮಪ್ಪ ನಮಗೆ ಎಷ್ಟು ಸ್ಪೇಶಲ್ ಎಂದು ತೋರಿಸುತ್ತಾರೆ. ಇನ್ನು ಕೆಲವರು ಕೇಕ್ ಕಟ್ ಮಾಡಿ ಸೆಲೆಬ್ರೇಟ್ ಮಾಡ್ತಾರೆ. ಇದನ್ನೆಲ್ಲ ನೋಡಿದ ಅಪ್ಪ ಖುಷಿಯಲ್ಲೇ ದಿನ ಕಳೆಯುತ್ತಾರೆ.
ಎಲ್ಲೆಡೆ ಅಪ್ಪಂದಿರ ದಿನದ ವಿಶೇಷ ಸ್ಟೋರಿಗಳನ್ನ ಕೇಳಿರ್ತೀರಾ..ನೋಡಿರ್ತೀರಾ.. ಆದ್ರೆ ಗುಜರಾತ್ ನ ವ್ಯಕ್ತಿಯೊಬ್ಬ ಮದುವೆಯಾಗದೇ ಅವಳಿ ಮಕ್ಕಳಿಗೆ ತಂದೆಯಾಗಿದ್ದಾನೆ. ಹೇಗೆ ಅಂದ್ರೆ, ಬಾಡಿಗೆ ತಾಯಿಯ ಮೂಲಕ ಅವಳಿ ಮಕ್ಕಳಿಗೆ ತಂದೆಯಾಗಿದ್ದಾನೆ. ಅವಳಿ ಮಕ್ಕಳನ್ನು ಪಡೆದ ತಂದೆ ಸದ್ಯ ಮಕ್ಕಳ ಲಾಲನೆ ಪಾಲನೆಯಲ್ಲೇ ಬಿಸಿಯಾಗಿದ್ದಾನೆ.
ಅಸಲಿಗೆ ಈತ ಮದುವೆಯಾಗಲು ಹೆಣ್ಣಿಗಾಗಿ ಅಲೆದಾಡಿ ಅಲೆದಾಡಿ ಸುಸ್ತಾಗಿದ್ದ. ಕೊನೆಗೆ ಬಾಡಿಗೆ ತಾಯಿಯ ಮೊರೆ ಹೋಗುವುದರ ಮೂಲಕ ಇದೀಗ ಇಬ್ಬರು ಮಕ್ಕಳಿಗೆ ತಂದೆಯಾಗಿದ್ದಾನೆ.
ಗುಜರಾತ್ ನ ಸೂರತ್ ನಿವಾಸಿ 37 ವರ್ಷದ ಪ್ರಿತೇಷ್ ದೇವ್ ಪಟೇಲ್ ಅವರ ಸ್ಟೋರಿ ನೀವು ಓದುತ್ತಿದ್ದೀರಾ. ಕಳೆದ ವ್ರ್ಷ ಬಾಡಿಗೆ ತಾಯಿ ಮೂಲಕ ಒಂದು ಗಂಡು ಹಾಗೂ ಎರಡು ಮಗುವನ್ನು ಪಡೆದಿದ್ದಾರೆ. ಅಸಲಿಗೆ ಪ್ರಿತೇಷ್ ಅವರ ಸಮುದಾಯದಲ್ಲಿ ಸರ್ಕಾರಿ ಉದ್ಯೋಗ ಇರುವವರಿಗೆ ಮಾತ್ರ ಹೆಣ್ಣನ್ನ ಕೊಡ್ತಾರೆ. ಆದ್ರೆ ಪ್ರಿತೇಷ್ ಸ್ವ ಉದ್ಯೋಗ ಮಾಡುತ್ತಿದ್ದಾರೆ. ಹೀಗಾಗಿ ಮದುವೆಯಾಗಲು ಹೆಣ್ಣಿಗಾಗಿ ಅಲೆದು ಅಲೆದು ಸುಸ್ತಾಗಿ ಕೊನೆಗೆ ಈ ನಿರ್ಧಾರಕ್ಕೆ ಬಂದಿದ್ದಾರೆ.
ಅಮ್ಮನಿಲ್ಲದೇ ಇಬ್ಬರು ಮಕ್ಕಳನ್ನು ನೋಡಿಕೊಳ್ಳುತ್ತಿರುವ ಪ್ರಿತೇಶ್ ಪಟೇಲ್ ಅಪ್ಪಂದಿರ ದಿನವನ್ನು ಸಾರ್ಥಕ ಮಾಡಿದ್ದಾರೆ.