ಇಂದು ದೆಹಲಿಯ ನೈರುತ್ಯ ದೆಹಲಿಯ ಆರ್‌ಕೆ ಪುರಂ ಪ್ರದೇಶದಲ್ಲಿ ಇಬ್ಬರು ಮಹಿಳೆಯರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಅಲ್ಲದೇ, ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಕೂಡ ಬಂಧಿಸಿದ್ದಾರೆ. ಅಂಬೇಡ್ಕರ್ ಬಸ್ತಿಯಲ್ಲಿ ತನ್ನ ಸಹೋದರಿಯರ ಮೇಲೆ ಗುಂಡು ಹಾರಿಸಲಾಗಿದೆ ಎಂದು ಸಂತ್ರಸ್ತರ ಸಹೋದರ ಪೊಲೀಸರಿಗೆ ಕರೆ ನೀಡಿದ್ದ. ಸ್ಥಳಕ್ಕೆ ಧಾವಿಸಿದ್ದ ಪೊಲೀಸರು ಗುಂಡೇಟು ತಿಂದಿದ್ದ ಇಬ್ಬರೂ ಮಹಿಳೆಯರನ್ನು ಆಸ್ಪತ್ರೆಗೆ ದಾಖಲಿಸಿದರು. ಆದರೆ, ಅಷ್ಟೊತ್ತಿಗಾಗಲೇ ಅವರೆಲ್ಲ ಸಾವನ್ನಪ್ಪಿದ್ದರು. ಮೃತರನ್ನು ಪಿಂಕಿ (30) ಮತ್ತು ಜ್ಯೋತಿ (29) ಎಂದು ಗುರುತಿಸಲಾಗಿದೆ.
ಪ್ರಾಥಮಿಕ ತನಿಖೆಯಿಂದ ದಾಳಿಕೋರರು ಸಂತ್ರಸ್ತೆಯರ ಸಹೋದರನಿಗೆ ತಿಳಿದವರಾಗಿದ್ದು, ಹಣದ ವ್ಯವಹಾರವೇ ಈ ಘಟನೆಗೆ ಕಾರಣ ಎಂದು ತಿಳಿದು ಬಂದಿದೆ.