ಬೆಂಗಳೂರು: ಕಲುಷಿತ ನೀರು (Contaminated water) ಸೇವಿಸಿ ಸಾವನ್ನಪ್ಪಿರುವ ಪ್ರಕರಣಗಳು ವರದಿಯಾಗಿರುವ ಹಿನ್ನಲೆಯಲ್ಲಿ ಪ್ರಕರಣಗಳ ತನಿಖೆ ನಡೆಸಲು ಮೂವರ ಅಧಿಕಾರಿಗಳ ತಂಡ ರಚಿಸಿ ಸರ್ಕಾರ (Government) ಆದೇಶ ಹೊರಡಿಸಿದೆ.
ಕೊಪ್ಪಳದ ಬಸರಿಹಾಳ, ಕುಷ್ಠಗಿಯ ಬಿಜಕಲ್ ಗ್ರಾಮದ ವಾಂತಿ ಭೇದಿ ಪ್ರಕರಣ ಮತ್ತು ದೇವದುರ್ಗದ ರೇಕಲಮಡಿಯಲ್ಲಿ ಕಲುಷಿತ ನೀರು ಸೇವಿಸಿ ಮಗು ಸಾವನ್ನಪ್ಪಿತ್ತು. ಹೀಗಾಗಿ ಐಎಎಸ್ ಅಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಅಧೀಕ್ಷಕ ಅಭಿಯಂತರ ಚಂದ್ರಹಾಸ್, ರಾಜತಾಂತ್ರಿಕ ಸಮಾಲೋಚಕ ಬಿ.ಆರ್. ವೆಂಕಟೇಶ್ ಅವರಿದ್ದ ತಂಡ ಕೂಲಂಕುಷವಾಗಿ ತನಿಖೆ ನಡೆಸಿ ಇದೇ ತಿಂಗಳು 20ರೊಳಗೆ ವರದಿ ನೀಡುವಂತೆ ಸೂಚಿಸಿದೆ.