ಐವರು ಪತ್ನಿಯರ ಗಂಡ, ಈಗ ಬಂಢತನ ಮಾಡಿದ್ದಾನೆ. 19 ವರ್ಷದ ಹಿಂದು ಯುವತಿಯನ್ನು ಅಪಹರಿಸಿ ಮದುವೆಯಾಗಿದ್ದಾನೆ. ಈ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ನಡೆದಿದ್ದು, ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ವಿವಿಧ ಹಿಂದುಪರ ಸಂಘಟನೆ ಹಾಗೂ ಭಜರಂಗದಳ ಕಾರ್ಯಕರ್ತರು ಪೊಲೀಸ್ ಠಾಣೆಯ ಹೊರಗೆ ಪ್ರತಿಭಟನೆ ನಡೆಸಿದ್ದಾರೆ.
ಅಲ್ಲದೇ, ಆರೋಪಿ ರಶೀದ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಆರೋಪಿ ರಶೀದ್ ಹಿಂದು ಯುವತಿಯನ್ನು ಅಪಹರಿಸಿ, ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿ ವಿವಾಹವಾಗಿದ್ದಾನೆ ಎಂದು ಹಿಂದು ಸಂಘಟನೆಗಳು ಆರೋಪಿಸಿವೆ. ಈ ಕುರಿತು ಪೊಲೀಸ್ ದೂರು ದಾಖಲಾಗುತ್ತಿದ್ದಂತೆ ಆರೋಪಿ, ಸಂತ್ರಸ್ತ ಯುವತಿಯ ಮನೆಗೆ ಕರೆ ಮಾಡಿ, ‘ಎಫ್‌ಐಆರ್ ಹಿಂತೆಗೆದುಕೊಳ್ಳದಿದ್ದರೆ ನಿಮ್ಮ ಇನ್ನೊಬ್ಬ ಮಗಳನ್ನೂ ಅಪಹರಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ಹಿಂದು ಯುವತಿ ಇನ್ನೂ ಕೂಡ ಆರೋಪಿ ವಶದಲ್ಲೇ ಇದ್ದಾಳೆ. ಜೂನ್ 22ರ ಒಳಗಾಗಿ ಯುವತಿಯನ್ನು ಪೊಲೀಸರು ಪತ್ತೆ ಮಾಡಿ, ರಕ್ಷಿಸದೇ ಹೋದಲ್ಲಿ ಇಡೀ ಗ್ರಾಮದಲ್ಲಿ ಪ್ರತಿಭಟನೆ ನಡೆಸುವುದಾಗಿ ಹಿಂದು ಕಾರ್ಯಕರ್ತರು ಎಚ್ಚರಿಸಿದ್ದಾರೆ. ಶಾಮ್ಲಿ ಜಿಲ್ಲೆಯ ಆದಂಪುರ ಗ್ರಾಮದ 19 ವರ್ಷದ ಯುವತಿ ಸನೌಲಿ ನಾಗ್ಲಾ ಗ್ರಾಮದಲ್ಲಿರುವ ತನ್ನ ಸಂಬಂಧಿಕರ ಮನೆಗೆ ತೆರಳಿದ್ದಳು. ಈ ಸಂದರ್ಭದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ಆಮಿಷವೊಡ್ಡಿ ಅಪಹರಿಸಿದ್ದಾನೆ. ಬಳಿಕ ಸಂಬಂಧಿಕರು ನಾಪತ್ತೆಯಾದ ಬಗ್ಗೆ ಛಪ್ರೌಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು ಎಂದು ವರದಿಯಾಗಿದೆ.
ಈಗಾಗಲೇ ಆರೋಪಿಯು ಐದು ಮದುವೆಯಾಗಿದ್ದು, ಐವರು ಪತ್ನಿಯರಲ್ಲಿ ಒಬ್ಬರು ಮಾತ್ರ ಮುಸ್ಲಿಂ ಧರ್ಮಕ್ಕೆ ಸೇರಿದ್ದಾರೆ. ಉಳಿದ ನಾಲ್ವರು ಹಿಂದು ಧರ್ಮಕ್ಕೆ ಸೇರಿದವರು. ಈತ ಉದ್ಧೇಶಪೂರ್ವಕವಾಗಿ ಹಿಂದು ಮಹಿಳೆಯರನ್ನು ಮತಾಂತರ ಮಾಡಿ ವಿವಾಹವಾಗುತ್ತಿದ್ದಾನೆ ಎಂದು ಕಾರ್ಯಕರ್ತರು ಆರೋಪಿಸಿದ್ದಾರೆ.