ಬಹು ನಿರೀಕ್ಷಿತ ಚಿತ್ರ ಆದಿಪುರುಷ್ ಈಗಾಗಲೇ ಬಿಡುಗಡೆಯಾಗಿದೆ. ಪ್ರಭಾಸ್ ನಟಿಸಿರುವ ಮೊದಲ ಹಿಂದಿ ಚಿತ್ರ ಇದಾಗಿದ್ದು, ಈ ಚಿತ್ರಕ್ಕೆ ಬಾಲಿವುಡ್ ನಿರ್ದೇಶಕ ಓಂ ರಾವತ್ ಆಕ್ಷನ್ ಕಟ್ ಹೇಳಿದ್ದಾರೆ.
ರಾಮನ ಪಾತ್ರದಲ್ಲಿ ಪ್ರಭಾಸ್, ಕೃತಿ ಸೆನನ್ ಸೀತೆಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ರಾವಣನ ಪಾತ್ರದಲ್ಲಿ ಸೈಫ್ ಅಲಿ ಖಾನ್ ಕಾಣಿಸಿಕೊಂಡಿದ್ದಾರೆ. ರಾಮಾಯಣ ಆಧಾರಿತ ಕಥೆ ಇರುವ ಚಿತ್ರ ಎಂದು ಪ್ರಚಾರ ಪಡೆದುಕೊಂಡಿದ್ದ ಈ ಸಿನಿಮಾ, ಹೀನಾಯವಾಗಿ ಟ್ರೋಲ್ ಆಗುತ್ತಿದೆ.
ಆದಿಪುರುಷ್ ತನ್ನ ಕಳಪೆ ವಿಎಫ್ಎಕ್ಸ್ ಕಾರಣಕ್ಕೆ ಕೆಟ್ಟ ಟೀಕೆ ಎದುರಿಸುತ್ತಿದೆ. ಸದ್ಯ ಸಿನಿ ರಸಿಕರು ಇದು ರಾಮಾಯಣ ಅಲ್ಲ. ಮಾಡರ್ನ್ ಅಪ್ಡೇಟೆಡ್ ರಾಮಾಯಣ ಎಂದು ಅಸಮಾಧಾನ ಹೊರಹಾಕಿದ್ದರು. ಚಿತ್ರದ ಮೊದಲ ಪ್ರದರ್ಶನ ಮುಗಿಯುತ್ತಿದ್ದಂತೆಯೇ ಚಿತ್ರದ ವಿರುದ್ಧ ದೊಡ್ಡ ಮಟ್ಟದಲ್ಲಿ ನೆಗೆಟಿವ್ ಕೇಳಿ ಬಂದಿದೆ. ಚಿತ್ರದಲ್ಲಿ ಎಲ್ಲ ಪಾತ್ರಗಳ ವಸ್ತ್ರದ ವಿಧಾನ ರಾಮಾಯಣಕ್ಕೆ ಹೋಲಿಕೆಯಾಗುತ್ತಿಲ್ಲ. ಪಾತ್ರಗಳ ಲುಕ್ ಸಹ ದೊಡ್ಡ ಮಟ್ಟದಲ್ಲಿ ಬದಲಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಹನುಮಂತನ ಪಾತ್ರದಲ್ಲೂ ಸಹ ಬದಲಾವಣೆ ಇದೆ ಎಂದು ಆರೋಪಿಸಿದ್ದ ಸಿನಿ ರಸಿಕರು ಹನುಮಂತ ಹೇಳುವ ಬಹುತೇಕ ಡೈಲಾಗ್ಗಳು ಈಗಿನ ಕಾಲದಲ್ಲಿ ಮಾತನಾಡುವ ಹಾಗಿದೆ. ಈ ಸಂಭಾಷಣೆಗಳನ್ನು ಕೇಳಿದಾಗ ಇದೊಂದು ಪೌರಾಣಿಕ ಚಿತ್ರ ಎನಿಸುವುದೇ ಇಲ್ಲ ಎಂದು ಕಿಡಿಕಾರಿದ್ದಾರೆ.
ಬದಲಾವಣೆಯ ಭರವಸೆ ನೀಡಿರುವ ಮನೋಜ್ ಮುಂತಾಶೀರ್ ‘ಆಜ್ ತಕ್’ ಜತೆ ನಡೆದ ಸಂದರ್ಶನವೊಂದರಲ್ಲಿ ಹನುಮಂತನ ಕುರಿತು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. “ಹನುಮಂತ ಶ್ರೀರಾಮನ ಹಾಗೆ ಅಲ್ಲ. ಹನುಮಂತ ತಾತ್ವಿಕವಾಗಿ ಮಾತನಾಡುವುದಿಲ್ಲ. ಹನುಮಂತ ದೇವರಲ್ಲ, ಆತ ಓರ್ವ ಭಕ್ತ. ಬಳಿಕ ಆತನನ್ನು ನಾವು ದೇವರನ್ನು ಮಾಡಿದೆವು. ಏಕೆಂದರೆ ಆತನ ಭಕ್ತಿ ಅಂತಹ ಶಕ್ತಿಯನ್ನು ಹೊಂದಿತ್ತು” ಎಂದು ಮನೋಜ್ ಮುಂತಾಶೀರ್ ಹೇಳಿಕೆ ನೀಡಿದ್ದಾರೆ. ಈ ರೀತಿಯ ಹೇಳಿಕೆ ನೀಡುವುದರ ಮೂಲಕ ಮನೋಜ್ ಮುಂತಾಶೀರ್ ವಿವಾದವನ್ನು ಎಬ್ಬಿಸಿದ್ದಾರೆ. ಹೀಗಾಗಿ ಈಗ ದೊಡ್ಡ ಮಟ್ಟದ ಟೀಕೆಗಳು ಎದುರಾಗುತ್ತಿವೆ. ಆದಿಪುರುಷ್ ಸಮಾಧಾನಕರ ಕಲೆಕ್ಷನ್ ಮಾಡುವಲ್ಲಿ ಯಶಸ್ವಿಯಾಗಿದೆ. ಮೊದಲ ದಿನ 140 ಕೋಟಿ ಗಳಿಸಿದ್ದ ಚಿತ್ರ ಎರಡನೇ ದಿನ 100 ಕೋಟಿ, ಮೂರನೇ ದಿನ 100 ಕೋಟಿ ಹಾಗೂ ನಾಲ್ಕನೇ ದಿನ 35 ಕೋಟಿ ಗಳಿಸಿದೆ.