ಲಂಡನ್ ನಲ್ಲಿ ಭಾರತೀಯ ಮೂಲದ ಮತ್ತೋರ್ವ ವಿದ್ಯಾರ್ಥಿಯ ಕೊಲೆ ನಡೆದಿರುವ ಘಟನೆ ನಡೆದಿದ್ದು, ವಾರದಲ್ಲಿ ಇದು ಮೂರನೇ ಘಟನೆಯಾಗಿದೆ. ಈ ಕೊಲೆಯ ನಂತರ ಮೂರನೇ ಪ್ರಕರಣ ಇದಾಗಿದೆ.
ಅರವಿಂದ್ ಶಶಿಕುಮಾರ್ ಎಂಬ 38 ವರ್ಷದ ಭಾರತೀಯ ಮೂಲದ ವ್ಯಕ್ತಿ ಸಾವನ್ನಪ್ಪಿದ್ದಾರೆ. ಜೂನ್ 16 ರಂದು ಅರವಿಂದ್ ಅವರನ್ನು ಇರಿದು ಹತ್ಯೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಕೇರಳದ ಕೊಚ್ಚಿ ಮೂಲದ ಅರವಿಂದ್ ಶಶಿಕುಮಾರ್ ಶುಕ್ರವಾರ ಕ್ಯಾಂಬರ್ ವೆಲ್ ನಲ್ಲಿರುವ ವಸತಿಯಲ್ಲಿ ಚಾಕು ಗಾಯಗಳೊಂದಿಗೆ ಪತ್ತೆಯಾಗಿದ್ದಾರೆ.
ಸೌತಾಂಪ್ಟನ್ ವೇನಲ್ಲಿ ನೆಲೆಸಿರುವ 25 ವರ್ಷದ ಸಲ್ಮಾನ್ ಸಲೀಂ ಎಂಬ ಶಂಕಿತನ ಮೇಲೆ ಶನಿವಾರ, ಜೂನ್ 17 ರಂದು ಕೊಲೆ ಆರೋಪ ಹೊರಿಸಲಾಗಿದೆ. ಅರವಿಂದ್, ಸಲೀಂ ಹಾಗು ಇತರ ಮೂವರೊಂದಿಗೆ ಹಂಚಿಕೊಂಡಿರುವ ಫ್ಲಾಟ್‌ನಲ್ಲಿ ಶುಕ್ರವಾರ ಇಬ್ಬರ ನಡುವೆ ಜಗಳ ನಡೆದಿದೆ ಎಂದು ವರದಿಯಾಗಿದೆ.
ಸಲ್ಮಾನ್ ಸಲೀಂ ಅವರನ್ನು ಅದೇ ದಿನ ಕ್ರೊಯ್ಡಾನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಿ, ಕಸ್ಟಡಿಗೆ ಒಪ್ಪಿಸಲಾಗಿದೆ. ಕೇರಳದ ಇತರ ಇಬ್ಬರು, ಅಪರಾಧವನ್ನು ನೋಡಿದ್ದರಿಂದ ಅವರನ್ನು ತನಿಖೆಯ ಭಾಗವಾಗಿ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಅರವಿಂದ್ ಶಶಿಕುಮಾರ್ ಕಳೆದ ಹತ್ತು ವರ್ಷಗಳಿಂದ ವಿದ್ಯಾರ್ಥಿ ವೀಸಾದಲ್ಲಿ ಲಂಡನ್‌ನಲ್ಲಿ ನೆಲೆಸಿದ್ದರು. ಈ ಸಂಕಷ್ಟದ ಸಮಯದಲ್ಲಿ ಶಶಿಕುಮಾರ್ ಕುಟುಂಬಕ್ಕೆ ಮೆಟ್ರೊಪಾಲಿಟನ್ ಪೊಲೀಸ್ ವಿಶೇಷ ಅಪರಾಧ ಕಮಾಂಡ್ ಬೆಂಬಲ ನೀಡುತ್ತಿದೆ. ಶುಕ್ರವಾರ ನಡೆಸಿದ ಮರಣೋತ್ತರ ಪರೀಕ್ಷೆಯಲ್ಲಿ ಎದೆಗೆ ಇರಿದ ಗಾಯಗಳಿಂದ ಅವರು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದ್ದಾರೆ