ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡಲು ಐದು ಜನ ಉತ್ತರ ಅಟ್ಲಾಂಟಿಕ್ ಗೆ ಹೋಗಿದ್ದರು. ಆ ಐವರು ಕೂಡ ನಾಪತ್ತೆಯಾಗಿದ್ದರು. ಇದೀಗ ಬಂದ ಸುದ್ದಿ ಏನಪ್ಪ ಅಂದ್ರೆ ನಾಪತ್ತೆಯಾಗಿದ್ದ ಜಲಾಂತರ್ಗಾಮಿಯಲ್ಲಿ ಪಾಕಿಸ್ತಾನದ ಪ್ರಮುಖ ಉದ್ಯಮಿ ಹಾಗೂ ಅವರ ಪುತ್ರ ಇದ್ದರು ಎಂದು ತಿಳಿದುಬಂದಿದೆ.
ಓಷನ್ ಗೇಟ್ ಎಕ್ಸ್ ಪೆಂಡಿಷನ್ ಕಂಪನಿ ನಿರ್ವಹಿಸುತ್ತಿದ್ದ ಟೂರಿಸ್ಟ್ ಕ್ರಾಫ್ಟ್ ಭಾನುವಾರ ಸಾಗರಕ್ಕೆ ಇಳಿಯುತ್ತಿದ್ದಂತೆ ಎರಡು ಗಂಟೆಗಳಲ್ಲಿ ತನ್ನ ಸಂಪರ್ಕವನ್ನು ಕಳೆದುಕೊಂಡಿದೆ. ಜಲಾಂತರ್ಗಾಮಿಗಳನ್ನು ಸುರಕ್ಷಿತವಾಗಿ ಕರೆತರಲು ಹಲವು ಕಂಪನಿಗಳು ಕೆಲಸ ನಡೆಸಿವೆ. ನಾಪತ್ತೆಯಾದ ಜಲಾಂತರ್ಗಾಮಿಗಳಲ್ಲಿ ಪಾಕಿಸ್ತಾನದ ಶ್ರೀಮಂತ ಉದ್ಯಮಿಯಲ್ಲೊಬ್ಬರಾದ ಶಹಜಾದಾ ದಾವೂದ್ ಅವರ ಮಗ ಹುಸೇನ್ ದಾವೂದ್ ಇದ್ದರು ಎನ್ನಲಾಗಿದೆ. ಖ್ಯಾತ ಎಂಗ್ರೋ ಕಂಪನಿಯ ಉಪಾಧ್ಯಕ್ಷ ಈ ಶಹಜಾದಾ ದಾವೂದ್. ಈ ಕಂಪನಿ 2022ರ ಕೊನೆಯಲ್ಲಿ 350 ಶತಕೋಟಿ ಆದಾಯ ಘೋಷಿಸಿದೆ.
ಇನ್ನು ನಾಪತ್ತೆಯಾದ ಜಲಾಂತರ್ಗಾಮಿಯಲ್ಲಿ ಬ್ರಿಟಿಷ್ ಉದ್ಯಮಿ ಹಮೀಶ್ ಹಾರ್ಡಿಂಗ್ ಕೂಡ ಇದ್ದರು. ಕೇವಲ ಮಏರಿಕಾ ಮಾತ್ರವಲ್ಲ ಕೆನಡಾದ ಹಡಗುಗಳು ಇದೀಗ ಜಲಾಂತರ್ಗಾಮಿಗಳಿಗಾಗಿ ಹುಡುಕಾಟ ನಡೆಸಿವೆ.