Bangalore: ಹಿರಿಯ ಪತ್ರಕರ್ತ ಮುಳ್ಳಳ್ಳಿ ಸೂರಿ ಇಂದು ನಿಧನರಾಗಿದ್ದಾರೆ. ನಾಲ್ಕು ತಿಂಗಳ ಹಿಂದೆ ಖಾಸಗಿ ಆಸ್ಪತ್ರೆಯಲ್ಲಿ ಬ್ರೈನ್ ಟ್ಯೂಮರ್ ಆಪರೇಶನ್ ಗೆ ಒಳಗಾಗಿದ್ದರು. ಬಳಿಕ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸಂಯುಕ್ತ ಕರ್ನಾಟಕ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಪತ್ರಕರ್ತರ ಸಹಕಾರ ಸಂಘ ಮತ್ತು ಪ್ರೆಸ್ ಕ್ಲಬ್ ನಲ್ಲಿ ಸಕ್ರಿಯರಾಗಿದ್ದರು.
ಹಿರಿಯ ಪತ್ರಕರ್ತ ಮುಳ್ಳಳ್ಳಿ ಸೂರಿ ನಿಧನ
