ನವದೆಹಲಿ: ಇತ್ತೀಚೆಗಷ್ಟೇ ಕೋವಿಡ್ ಲಸಿಕೆ ಪಡೆದುಕೊಂಡವರ ಮಾಹಿತಿ ಸೋರಿಕೆಯಾಗಿರುವ ಕುರಿತು ವರದಿಯಾಗಿತ್ತು. ಹೀಗಾಗಿ ಈ ಕೋವಿನ್ (CoWIN) ಪೋರ್ಟಲ್ ನಿಂದ ಡೇಟಾ ಸೋರಿಕೆ (Date Leak)ಯ ಆರೋಪದ ಹಿನ್ನೆಲೆಯಲ್ಲಿ ಬಿಹಾರ ಮೂಲದ ಅಪ್ರಾಪ್ತ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ.
ಟೆಲಿಗ್ರಾಂ ಆ್ಯಪ್ ಬಳಸಿ ಡೇಟಾ ಸೋರಿಕೆ ಮಾಡಲಾಗಿದೆ ಎನ್ನಲಾಗಿದೆ. ಕೋವಿನ್ ಪ್ಲಾಟ್‌ಫಾರ್ಮ್‌ನಲ್ಲಿ ನೋಂದಾಯಿಸಲಾದ ನಾಗರಿಕರ ಡೇಟಾ ಸೋರಿಕೆಯಾಗಿರುವ ಕುರಿತು ಕಳವಳ ವ್ಯಕ್ತವಾಗಿದ್ದು, ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪ್ರತಿಪಕ್ಷಗಳು ಸರ್ಕಾರವನ್ನು ಕೇಳಿಕೊಂಡಿವೆ. ಆದರೆ ಸರ್ಕಾರ, ಕೋವಿನ್ ಪೋರ್ಟಲ್‌ನಲ್ಲಿ ಡೇಟಾ ಗೌಪ್ಯತೆಗೆ ಸಾಕಷ್ಟು ಸುರಕ್ಷತೆ ಇದ್ದರೂ ಯಾವುದೇ ಆಧಾರಗಳಿಲ್ಲ ಎಂದು ಹೇಳಲಾಗಿತ್ತು.
ನೋಡಲ್ ಸೈಬರ್ ಸೆಕ್ಯುರಿಟಿ ಏಜೆನ್ಸಿ ಸಿಇಆರ್‌ಟಿ-ಇನ್ ಪರಿಶೀಲನೆಗೆ ಕಳುಹಿಸಿದ್ದು, ಅದು ತನ್ನ ಆರಂಭಿಕ ವರದಿಯಲ್ಲಿ ಡೇಟಾ ಸೋರಿಕೆ ಟೆಲಿಗ್ರಾಂ ಆ್ಯಪ್ ಮೂಲಕ ಮಾಡಲಾಗಿದೆ ಎಂದು ಹೇಳಿತ್ತು. ಸದ್ಯ ಈ ಆರೋಪದ ಹಿನ್ನೆಲೆಯಲ್ಲಿ ಬಾಲಕ ಹಾಗೂ ಓರ್ವ ವ್ಯಕ್ತಿಯನ್ನು ಬಂಧಿಸಿದ್ದಾರೆ.