ಮಾಜಿ ಪೋರ್ನ್ ಸ್ಟಾರ್ ಹಾಗೂ ನಟಿ ಸನ್ನಿ ಲಿಯೋನ್ ತಮ್ಮ ವಯಸ್ಸಿನ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಕಳೆದ ಮೇ ತಿಂಗಳಲ್ಲಿ ತಮ್ಮ 42ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.
ಸನ್ನಿ ಲಿಯೋನ್ ಸೌದರ್ಯಕ್ಕೆ ಮಾರು ಹೊಗದವರೇ ಇಲ್ಲ. ಇತ್ತೀಚೆಗೆ ತಮ್ಮ ಪತಿಯ ಜೊತೆ ಸನ್ನಿ ಮಾಲ್ಡೀವ್ಸ್ ಗೆ ಹೋಗಿದ್ದರು. ವೆಕೇಶನ್ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದರು. ಇವರ ಸೌದರ್ಯವನ್ನು ನೋಡಿದ ಫ್ಯಾನ್ಸ್ ಕಣ್ಬಿಟ್ಕೊಂಡು ನೋಡಿದ್ದಾರೆ. ಅವರ ಹಾಟ್ ಫೋಟೋ ನೋಡಿದ್ರೆ ನಟಿಗೆ 42 ವರ್ಷ ಆಗಿದೆಯಾ ಅನ್ನೋ ಡೌಟ್ ಕಾಡುತ್ತೆ.
ತಮ್ಮ ವಯಸ್ಸಿನ ಬಗ್ಗೆ ಹೇಳಿಕೊಂಡಿರುವ ನಟಿ, ನನಗೆ ವಯಸ್ಸಾಗಿದೆ ಎನ್ನುವುದು ತಪ್ಪು. ನನಗೆ ಇನ್ನು ಶಕ್ತಿ ಇದೆ. ಸಾಕಷ್ಟು ವ್ಯಾಯಾಮ ಮಾಡುತ್ತೇನೆ. ಚೆನ್ನಾಗಿ ತಿನ್ನುತ್ತೇನೆ. ನನ್ನ ಕುಟುಂಬ ಹಾಗೂ ಮಕ್ಕಳೊಂದಿಗೆ ಖುಷಿ ಖುಷಿಯಾಗಿ ಇದ್ದೇನೆ. ಅವರಿಂದಲೇ ನನಗೆ ಏನರ್ಜಿ ಸಿಗುತ್ತದೆ ಎಂದು ಹೇಳಿದ್ದಾರೆ.

