ಹುಡುಗಿಯನ್ನು ಚುಡಾಯಿಸುವ ರೋಡ್ ರೋಮಿಯೋಗಳು ಈ ವಿಡಿಯೋ ನೋಡಲೇಬೇಕು. ಯಾಕೆಂದ್ರೆ ಪ್ರತಿದಿನ ತಾನು ಹೋಗುತ್ತಿದ್ದ ರಸ್ತೆಯಲ್ಲಿ ನಿಂತು ಚುಡಾಯಿಸುತ್ತಿದ್ದ ರೋಡ್ ರೋಮಿಯೋಗೆ ಯುವತಿ ಗೂಸಾ ಕೊಟ್ಟ ಘಟನೆ ಅಹಮದಾಬಾದ್ ನಲ್ಲಿ ನಡೆದಿದೆ.
17 ವರ್ಷದ ಒಡಿಶಾದ ಬೆಹ್ರಾಂಪುರದ ಯುವತಿ ತನ್ನ ಸಹೋದರಿಯ ಸಹಾಯದಿಂದ ಈ ಕೆಲಸ ಮಾಡಿದ್ದಾಳೆ. ಇದೀಗ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ವೈರಲ್ ಆಗಿರುವ ಈ ವಿಡಿಯೋದಲ್ಲಿ ನೆಲದ ಮೇಲೆ ಆರೋಪಿ ಬಿದ್ದಿದ್ದಾನೆ, ಒಬ್ಬ ಹುಡುಗಿ ಅವನನ್ನು ಥಳಿಸಿದರೆ ಮತ್ತೊಬ್ಬ ಹುಡುಗಿ ದಾರಿಯಲ್ಲಿ ಹೋಗುವಾಗ ಕಿರುಕುಳ ನೀಡುತ್ತಿದ್ದ ಎಂದು ಸಾರ್ವಜನಿಕರಿಗೆ ಸಿಟ್ಟಿನಿಂದ ಹೇಳುತ್ತಿದ್ದಾಳೆ.
ಘಟನೆಯ ನಂತರ ಬಾಲಕಿಯ ಮನೆಗೆ ಶಾಲೆಯಿಂದ ಕಾಲ್ ಮಾಡಿದ್ದಾರೆ. ನಿಮ್ಮ ಚಿಕ್ಕ ಮಗಳನ್ನು ರಸ್ತೆ ಮಧ್ಯೆದಲ್ಲಿ ಚುಡಾಯಿಸುತ್ತಿದ್ದವನನ್ನು ನಿಮ್ಮ ಇಬ್ಬರು ಮಕ್ಕಳು ಥಳಿಸಿದ್ದಾರೆ. ಬಲವಂತವಾಗಿ ಹುಡುಗಿಯ ಕೈ ಹಿಡಿದು ಗಿಫ್ಟ್ ಕೊಡಲು ಹೋಗಿದ್ದಾನೆ. ಆಕೆ ಗಿಫ್ಟ್ ತೆಗೆದುಕೊಳ್ಳಲು ನಿರಾಕರಿಸಿದಾಗ ಆಕೆಯ ಬ್ಯಾಗ್ ನಲ್ಲಿ ಇಟ್ತಿದ್ದಾನೆ. ನಂತರ ಆಕೆಗೆ ಬಲವಂತವಾಗಿ ಮುತ್ತು ಕೊಟ್ಟು ಕಿರುಕುಳ ನೀಡಿದ್ದಾನೆ.
ಸದ್ಯ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.