ಸ್ಮಾರ್ಟ್ ಫೋನ್ (Smart Phones) ಗಳು ಇತ್ತೀಚೆಗೆ ಮಾರುಕಟ್ಟೆಯಲ್ಲಿ ಹೆಚ್ಚಾಗಿ ಬರುತ್ತೀವೆ. ನಾ ಮುಂದು ತಾ ಮುಂದು ಎಂದು ಬ್ರ್ಯಾಂಡ್ (Brand)ಗಳು ಹೊಸ ಹೊಸ ಮಾಡೆಲ್ ಹಾಗೂ ಕಲರ್ ಗಳ ಫೋನ್ ಲಾಂಚ್ ಮಾಡ್ತಾನೇ ಇವೆ. ಆದರೆ ಸದ್ಯದ ಮಟ್ತಿಗೆ ಹೆಚ್ಚು ಬೇಡಿಕೆಯಲ್ಲಿದೆ ಒನ್ ಪ್ಲಸ್ ಮೊಬೈಲ್ ಕಂಪನಿ. ಈ ಕಂಪನಿ ಇಲ್ಲಿಯವರೆಗ್Y ದುಬಾರಿ ಫೋನ್ ಗಳನ್ನೇ ಮಾರುಕಟ್ಟೆಗೆ ಲಾಂಚ್ ಮಾಡಿದೆ. ಸದ್ಯ ಮತ್ತೊಂದು ಮಾಡೆಲೆ ಬಿಡುಗಡೆ ಮಾಡಲು ಸಜ್ಜಾಗಿದೆ ಒನ್ ಪ್ಲಸ್(One Plus).
ಈ ಹಿಂದೆ ಒನ್ ಪ್ಲಸ್ ನಾರ್ಡ್ 3 (One Plus Nord 3) ಸ್ಮಾರ್ಟ್ ಫೋನ್ ಬಿಡುಗಡೆ ಮಾಡೋದಾಗಿ ಹೇಳಿತ್ತು. ಆದರೆ ಬಿಡುಗಡೆಗೂ ಮುನ್ನನೇ ಮೊಬೈಲ್ ನ ಫೀಚರ್ಸ್ ಲೀಕ್ ಆಗಿ ಬಿಟ್ತಿದೆ.
ಒನ್ ಪ್ಲಸ್ ನಾರ್ಡ್ 3 ಸ್ಮಾರ್ಟ್ ಫೋನ್ ಜೂನ್ ಹಾಗೂ ಜೂಲೈ ನಡುವೆ ಬಿಡುಗಡೆಯಾಗಬಹುದು ಎನ್ನುವ ಅಂದಾಜಿತ್ತು. ಈ ಸ್ಮಾರ್ಟ್ ಫೋನ್ 6.72 ಇಂಚಿನ ಫುಲ್ ಸ್ಕ್ರೀನ್ ರೆಸಲ್ಯೂಶನ್ ಹೊಂದಿದೆ. ಜೊತೆಗೆ 120z ರಿಫ್ರೆಶ್ ರೇಟ್ ಹೊಂದಿರಲಿದೆ. ಅಷ್ಟೇ ಅಲ್ಲ ಟ್ರಿಪಲ್ ರಿಯಲ್ ಕ್ಯಾಮರಾ ಸೆಟ್ ಅಪ್ ಕೂಡ ಹೊಂದಿದೆ. ಇನ್ನು ಸೆಲ್ಫಿ ಹಾಗೂ ವಿಡಿಯೋ ಕಾಲ್ ಗೆ 16 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಕ್ಯಾಮರಾ ಅವಳವಡಿಸಿದ್ದಾರೆ. 5,000mAh ಬ್ಯಾಟರಿ ಸಾಮರ್ಥ್ಯ ಹಾಗೂ 80W superVOOC ಚಾರ್ಜಿಂಗ್ ಸಪೋರ್ಟ್ ಮಾಡುತ್ತದೆ.
ಜೂನ್ ಅಥವಾ ಜೂಲೈನಲ್ಲಿ ಮಾರುಕಟ್ಟೆಗೆ ಬರುವ ನಿರೀಕ್ಷೆ ಇದೆ. ಈ ಫೋನ್ ಬೆಲೆ ಬಗ್ಗೆ ಕಂಪನಿ ಯಾವುದೇ ರೀತಿಯ ಮಾಹಿತಿ ತಿಳಿಸಿಲ್ಲ.