ರಶ್ಮಿಕಾ ಮಂದಣ್ಣ (Rashmika mandanna)ಫಿಲ್ಮಿ (Film)ಕೆರಿಯನ್ ತುಂಬಾನೇ ಚೆನ್ನಾಗಿ ನಡೆಯುತ್ತಿದೆ. ಫಾಸ್ಟ್ ಫಾರ್ವರ್ಡ್ ನಲ್ಲಿ ಮುಂದೆ ಹೋಗ್ತಾ ಇರೋ ರಶ್ಮಿಕಾ ಹಿಂದೆ ತಿರುಗಿ ನೋಡುವಷ್ಟೂ ಪುರುಸೋತ್ತಿಲ್ಲ. ಬ್ಯಾಕ್ ಟು ಬ್ಯಾಕ್ ಸಿನಿಮಾ ಸಿನಿಮಾ. ಈ ಬ್ಯುಸಿ ಶೆಡ್ಯೂಲ್ ನಲ್ಲಿಯೂ ವಿಜಯ್ ದೇವರಕೊಂಡ ಅವರ ಫ್ಯಾಮಿಲಿ (Family)ಜೊತೆ ಡಿನ್ನರ್ (Dinner) ಮಾಡಿದ್ದಾರೆ. ಅಷ್ಟೇ ಅಲ್ಲ ವಿಜಯ್ ದೇವರಕೊಂಡ (Vijay devarakonda) ಕೂಡ ಟರ್ಕಿಯಲ್ಲಿ ಶೂಟಿಂಗ್ ಮುಗಿಸಿ ಬಂದಿದ್ದಾರೆ. ಇಷ್ಟು ಬ್ಯೂಸಿ ಇರುವ ಇಬ್ಬರೂ ಕುಟುಂಬದ ಜೊತೆ ಡಿನ್ನರ್ ಮಡಿದ್ಯಾಕೆ..? ಈ ಮೀಟಿಂಗ್ ರಹಸ್ಯೆವೇನು ಅಂತಿದ್ದಾರೆ ಫ್ಯಾನ್ಸ್!
ಒಮ್ಮೊಮ್ಮೆ ನೇವರಾಗಿ ಹಾಗೂ ಒಮ್ಮೊಮ್ಮೆ ಸೀಕ್ರೇಟಾಗಿ ಇಬ್ಬರು ಕಾಣಿಸಿಕೊಳ್ತಾರೆ. ಇದರಿಂದ ಫ್ಯಾನ್ಸ್ ತಲೆಕೆಡಿಸಿಕೊಂಡಿದ್ದಾರೆ. ಸಿನಿಮಾ ಶೂಟಿಂಗ್ ಅಥವಾ ಪ್ರಮೋಶನ್ ವೇಳೆ ಕೋಸ್ಟಾರ್ ಗಳು ಜೊತೆಯಾಗಿ ಕಾಣಿಸಿಕೊಳ್ಳುವುದು ಸಹಜ. ಆದರೆ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಮಾತ್ರ ಅವಾಗವಾಗ ಜೊತೆಯಾಗಿ ಕಾಣ್ಟಾನೇ ಇರ್ತಾರೆ.
ಹೈದರಾಬಾದ್ ರೆಸ್ಟೋರೆಂಟ್ ಒಂದರಲ್ಲಿ ಫ್ಯಾಮಿಲಿ ಜೊತೆ ಡಿನ್ನರ್ ಗೆ ಹೋಗಿದ್ದಾರೆ. ಯಾವುದೋ ಕಾರಣಕ್ಕೆ ರಶ್ಮಿಕಾ ಎದ್ದು ನಿಂತು ಚಿಕ್ಕದೊಂದು ಸ್ಟೆಪ್ ಹಾಕಿದ್ದಾರೆ. ದೂರದಲ್ಲಿಯೇ ಕುಳಿಯ ವ್ಯಕ್ತಿಯೊಬ್ಬ ತನ್ನ ಮೊಬೈಲ್ ನಲ್ಲಿ ಫೋಟೋ ಕ್ಲಿಕ್ ಮಾಡಿದ್ದಾನೆ. ಈ ಫೋಟೋದಿಂದಲೇ ನೋಡಿ ಇವರಿಬ್ಬರ ಫ್ಯಾಮಿಲಿ ಡಿನ್ನರ್ ಮೀಟಿಂಗ್ ಗುಟ್ಟು ರಟ್ಟಾಗಿದ್ದು.
ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಅವರ ಬಗೆಗಿನ ಗಾಸಿಪ್ ಗೆ ಈ ಫೋಟೋ ತುಪ್ಪ ಸುರಿದಂತಾಗಿದೆ. ವಿಷಯ ಏನೇ ಇರಲಿ ಜೋಡಿಗೆ ಒಳ್ಳೇದಾಗಲಿ.

