Kornersite

Entertainment Gossip Just In Mix Masala State

ಲೇಡಿ ಬಸ್ ಡ್ರೈವರ್ ಗೆ ಕಾರು ಗಿಫ್ಟ್ ಕೊಟ್ಟ ನಟ ಕಮಲ್ ಹಾಸನ್!

ಈ ಲೇಡಿ ಸಾಮಾನ್ಯದವಳಲ್ಲ. ಇವಳ ಕೆಲಸಕ್ಕೆ ಅನೇಕ ಗಣ್ಯರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಕೊಯಮತ್ತೂರಿನಲ್ಲಿ ಸಾರಿಗೆ ಬಸ್ ಓಡಿಸಿದ ಮೊದಲ ಮಹಿಳಾ ಚಾಲಕಿ ಎನ್ನುವ ಹೆಗ್ಗಳಿಕೆ ಪಾತ್ರಳಾಗಿದ್ದಾಳೆ. ಈಕೆಯ ಹೆಸರು ಶರ್ಮಿಳಾ.

ತಮಿಳುನಾಡಿನ ಕೊಯಮತ್ತೂರಿನ ಶರ್ಮಿಳಾ ಎಂಬ ಮಹಿಳೆ ಖಾಸಗಿ ಬಸ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾಳೆ. ಗಾಂಧಿಪುರದಿಂದ ಸೋಮನೂರು ಮಾರ್ಗವಾಗಿ ಖಾಸಗಿ ಬಸ್ ಚಾಲಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾಳೆ. ಈಕೆಯ ಕೆಲಸ ಮೆಚ್ಚಿದ ನಟ ಕಮಲ್ ಹಾಸನ್ ಕಾರಿ ಗಿಫ್ಟ್ ಕೊಟ್ತಿದ್ದಾರೆ. ಶರ್ಮಿಳಾನ ಫ್ಯಾಮಿಯವರನ್ನು ಕಮಲ್ ಹಾಸನ್ ತಮ್ಮ ಮನೆಗೆ ಕರೆಸಿಕೊಂಡಿದ್ದಾರೆ. ನಂತರ ಚಾಲಕಿ ಶರ್ಮಿಳಾಗೆ ಕಾರು ಗಿಫ್ಟ್ ನೀಡಿದ್ದಾರೆ.

ಇತ್ತೀಚೆಗೆ ಕೊಯಮತ್ತೂರಿನ ಕಾರ್ಯಕ್ರಮಗಳಿಗೆ ಭೇಟಿ ನೀಡಿದ ಸಂಸದೆ ಕನಿಮೊಳಿ, ಶರ್ಮಿಳಾರನ್ನ ಭೇಟಿಯಾಗಿದ್ದಾರೆ. ಶರ್ಮಿಳಾ ಜೊತೆ ಫೋಟೋ ಕೂಡ ತೆಗೆಸಿಕೊಂಡಿದ್ದರು. ಆಕೆಯನ್ನು ಹೊಗಳಿದ್ದರು. ಇದಾದ ಬಳಿಕ ಕನಿಮೋಳಿ ಟಿಕೆಟ್ ಕೊಡುವ ವಿಚಾರವಾಗಿ ಶರ್ಮಿಳಾ ಹಾಗೂ ಕಂಡಕ್ಟರ್ ನಡುವೆ ವಾಗ್ವಾದ ನಡೆದಿತ್ತು. ಇದಾದ ಬಳಿಕ ಬಸ್ ಮಾಲೀಕರು ತಮ್ಮನ್ನು ಟೀಕಿಸಿದ್ದಾರೆ ಎಂದು ಶರ್ಮಿಳಾ ಆರೋಪ ಮಾಡಿದ್ದಳು. ಇದಾದ ನಂತರ ಆಕೆಯನ್ನು ಕೆಲಸದಿಂದ ವಜಾ ಮಾಡಲಾಗಿತ್ತು.

ಇದೀಗ ಶರ್ಮಿಳಾ ಕಷ್ಟಕ್ಕೆ ಮರುಗಿದ ಕಮಲ್ ಹಾಸನ್ ಆಕೆಗೆ ಕಾರು ಗಿಫ್ಟ್ ಮಾಡಿದ್ದಾರೆ. ಶರ್ಮಿಳಾರಮ್ತೆ ಅನೇಕರನ್ನು ಸೃಷ್ಟಿಸಬೇಕು. ಕಮಲ್ ಹಾಸನ್ ಕೊಟ್ಟ ಕಾರಿನ ಮೂಲಕ ತಮ್ಮ ಪ್ರಯಾಣವನ್ನು ಆರಂಭ ಮಾಡಿದ್ದಾರೆ ಶರ್ಮಿಳಾ.

You may also like

Crime Karnataka State

ಕೊಲೆಯಲ್ಲಿ ಅಂತ್ಯವಾದ ವ್ಹೀಲಿಂಗ್ ಗಲಾಟೆ

ಹಾಸನ : ವ್ಹೀಲಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜಿಲ್ಲೆಯ ಗವೇನಹಳ್ಳಿಯಲ್ಲಿ ನಡೆದಿದೆ.ಘಟನೆಯಲ್ಲಿ ಆಟೋ ಚಾಲಕ ಸುಮಂತ್ (20) ಕೊಲೆಯಾದ ದುರ್ದೈವ ಯುವಕ.
Entertainment Gossip Mix Masala

ಆಸ್ಕರ್ ಇವೆಂಟ್ ನಲ್ಲಿ ಭಾಗವಹಿಸಲು ಹಣದ ಹೊಳೆಯನ್ನೇ ಹರಿಸಿರುವ ರಾಜಮೌಳಿ ಹಾಗೂ ತಂಡ

ಸ್ಟಾರ್ ನಿರ್ದೇಶಕ ರಾಜಮೌಳಿ ಅವರ ಶ್ರಮದಿಂದಾಗಿ ಭಾರತಕ್ಕೆ ಆಸ್ಕರ್ ಪ್ರಶಸ್ತಿ ಬರುವಂತಾಗಿದೆ. ಆರ್ ಆರ್ ಆರ್ ಚಿತ್ರದ ನಾಟು ನಾಟು ಹಾಡು ಆಸ್ಕರ್ ಪ್ರಶಸ್ತಿ ಗೆದ್ದುಕೊಂಡಿದೆ. ಆದರೆ,