ಕೆಲವೇ ದಿನಗಳಲ್ಲಿ ಶ್ರಾವಣ ಮಾಸ ಶುರುವಾಗಲಿದೆ. ಶ್ರಾವಣ ಮಾಸ ಹಿಂದೂಗಳಿಗೆ ಬಹುಮುಖ್ಯ. ಅಲ್ಲದೇ ಈ ಮಾಸವನ್ನು ಶಿವನ ನೆಚ್ಚಿನ ತಿಂಗಳು ಅಂತಲೂ ಹೇಳಲಾಗುತ್ತದೆ. ಶಿವನ ಪ್ರೀತಿಗೆ ಪಾತ್ರರಾಗಬೇಕು ಎಂದು ಈ ತಿಂಗಳು ದಿ ಬೆಸ್ಟ್. ಹಲವರು ಶ್ರಾವಣ ಮಾಸದಲ್ಲಿ ಶ್ರಾವಣ ಸೋಮವಾರದಂದು ಉಪವಾಸ ಮಾಡುತ್ತಾರೆ. ಹೀಗೆ ಮಾಡುವುದರ ಮೂಲಕ ಶಿವನು ಪ್ರಸನ್ನನಾಗುತ್ತಾನೆ ಹಾಗೂ ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತಾನೆ ಎನ್ನುವ ನಂಬಿಕೆ ಇದೆ.
ಶಿವಲಿಂಗದ ಮೇಲೆ ಹಾಲು ಹಾಕಿ ಅಭಿಶೇಕ ಮಾಡುವುದರಿಂದ ಶ್ರಾವಣ ಮಾಸದಲ್ಲಿ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಶ್ರಾವಣದಲ್ಲಿ ಪ್ರತಿದಿನ ಶಿವಲಿಂಗಕ್ಕೆ ಹಾಲು ಹಾಕುವುದರಿಂದ ಜಾತಕದಲ್ಲಿ ಚಂದ್ರನ ಸ್ಥಾನ ಬಲಗೊಳ್ಳುತ್ತದೆ. ಶಿವನಿಗೆ ಕೇಸರಿ ಮಿಶ್ರಿತ ಖೀರ್ ಅರ್ಪಿಸುವುದರಿಂದ ಉಧ್ಯೋಗ ಹಾಗೂ ವ್ಯವಹಾರದಲ್ಲಿ ಲಾಭ ಸಿಗುತ್ತದೆ. ಮೃತ್ಯುಂಜಯ ಮಂತ್ರ ಹೇಳುವುದರಿಂದ ಆರೋಗ್ಯ ಪ್ರಾಪ್ತಿಯಾಗುತ್ತದೆ.
ಶ್ರಾವಣ ಮಾಸದಲ್ಲಿ ಆಹಾರದ ಬಗ್ಗೆ ವಿಶೇಷ ಕಾಲಜಿ ವಹಿಸಬೇಕು. ಶ್ರಾವಣ ಮಾಸದಲ್ಲಿ ಮಾಂಸ ಹಾಗೂ ಮದ್ಯ ಸೇವಿಸಬಾರದು. ಈ ಕೆಲವೊಂದು ಪೂಜಾ ವಿಧಾನಗಳನ್ನು ಪಾಲಿಸೋದರಿಂದ ನಿಮ್ಮ ಕಷ್ಟಗಳು ತೊಲಗಿ, ಬಯಸಿದ್ದು ಸಿಗುತ್ತದೆ ಎಂಬ ನಂಬಿಕೆ ಇದೆ.