Kornersite

Crime Extra Care Just In Relationship

ಫಸ್ಟ್ ನೈಟ್ ದಿನದಂದೇ ಹೆಣ್ಣು ಮಗುವಿನ ತಾಯಿಯಾದ ವಧು! ಏದೇನು ಆಶ್ಚರ್ಯ..?

Noida: ಮದುವೆಯಾದ ಮೊದಲ ರಾತ್ರಿಯೇ ಹೆಣ್ಣು ಮಗುವಿಗೆ ತಾಯಿಯಾದಳು ವಧು. ಈ ಘಟನೆ ನಡೆದಿದ್ದು ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ. ತೆಲಂಗಾಣದ ಸಿಕಂದರಾಬಾದ್ ನಿವಾಸಿ ಗ್ರೇಟರ್ ನೋಯ್ಡಾದ ಗ್ರಾಮವೊಂದರಲ್ಲಿ ಮದುವೆಯಾಗಿದ್ದಳು. ಮದುವೆಯ ಫಸ್ಟ್ ನೈಟ್ ದಿನದಂದು ವಧುವಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿಯೇ ನೋಡಿ ಎಲ್ಲರಿಗೂ ಶಾಕ್ ಕಾದಿದ್ದು. ಯಾಕೆಂದ್ರೆ ವಧು ಏಳು ತಿಂಗಳು ಗರ್ಭಿಣಿ ಎಂದು ಹೇಳಿದ್ದಾರೆ. ಮಾರನೇ ದಿನವೇ ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.

ಈ ವಿಚಾರ ಗೊತ್ತಾದ ಮೇಲೆ ವರನ ಮನೆಯವರು ಗಲಾಟೆ ಮಾಡಿದ್ದಾರೆ. ಈ ವಿಚಾರ ಮೊದಲೇ ಗೊತ್ತಿದ್ದು, ವಿಷಯ ಮುಚ್ಚಿಟ್ಟು ಮದುವೆ ಮಾಡಿದ್ದೀರಾ ಎಂದು ಆರೋಪ ಮಾಡಿದ್ದಾರೆ. ಆದರೆ ಹೆಣ್ಣಿನ ಮನೆಯವರು ಹೇಳೋದೇ ಬೇರೆ. ಇತ್ತೀಚೆಗೆ ಕಿಡ್ನಿಯಲ್ಲಿ ಕಲ್ಲು ಆಗಿದ್ದು ಅದನ್ನು ತೆಗೆಸಲು ಶಸ್ತ್ರಚಿಕಿತ್ಸೆ ಮಾಡಿಸಿದ್ದೇವು. ಇದೇ ಕಾರಣಕ್ಕೆ ಆಕೆಯ ಹೊಟ್ಟೆ ಉಬ್ಬಿದೆ ಎಂದು ಹೇಳಿದ್ದಾರೆ.

ಇಷ್ಟೇಲ್ಲ ಘಟನೆಯಾದ ನಂತರ ವರ ಹಾಗೂ ವರನ ಮನೆಯವರು ಆಕೆಯನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದಾರೆ. ಎರಡೂ ಕುಟುಂಬದವರು ಕೂತು ಮಾತನಾಡಿಕೊಂಡು ಪೊಲೀಸ್ ಟಾಣೆಯ ಮೆಟ್ಟಿಲೇರೋದು ಬೇಡ ಎಂದು ತೀರ್ಮಾನಿಸಿದ್ದಾರೆ. ನಂತರ ಹುಡುಗಿಯನ್ನು ತಮ್ಮೊಂದಿಗೆ ಕರೆದುಕೊಂಡು ಬಂದಿದ್ದಾರೆ.

You may also like

Crime Karnataka State

ಕೊಲೆಯಲ್ಲಿ ಅಂತ್ಯವಾದ ವ್ಹೀಲಿಂಗ್ ಗಲಾಟೆ

ಹಾಸನ : ವ್ಹೀಲಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜಿಲ್ಲೆಯ ಗವೇನಹಳ್ಳಿಯಲ್ಲಿ ನಡೆದಿದೆ.ಘಟನೆಯಲ್ಲಿ ಆಟೋ ಚಾಲಕ ಸುಮಂತ್ (20) ಕೊಲೆಯಾದ ದುರ್ದೈವ ಯುವಕ.
Crime

ಬೈಕ್ ನಲ್ಲಿಯೇ ಸಹೋದರಿಯ ಶವ ಸಾಗಿಸಿದ ಅಣ್ಣ!

ನವದೆಹಲಿ : ಆಂಬುಲೆನ್ಸ್ ಬರುವುದಕ್ಕೆ ನಿರಾಕರಿಸಿರುವ ಹಿನ್ನೆಲೆಯಲ್ಲಿ ಯುವಕನೊಬ್ಬ ತನ್ನ ಸಹೋದರಿಯ ಮೃತ ದೇಹವನ್ನು ಬೈಕ್ ನಲ್ಲಿಯೇ ತೆಗೆದುಕೊಂಡು ಹೋಗಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಕೌಶಾಂಬಿಯಲ್ಲಿ