Agra: ಉತ್ತರ ಪ್ರದೇಶದ ಆಗ್ರಾದಲ್ಲಿ ವೃದ್ದನೊಬ್ಬ ತನ್ನ ಸೊಸೆಯ ತಲೆ ಕಡಿದು ಪೊಲೀಸರಿಗೆ ಶರಣಾಗಿದ್ದಾನೆ. ಆರೋಪಿ ರಘುವೀರ್ ಸಿಂಗ್ (62), ತನ್ನ ಸೊಸೆ ಪ್ರಿಯಾಂಕಾ (28)ಳನ್ನ ಕೊಲೆ ಮಾಡಿದ್ದಾನೆ. ಪ್ರಿಯಾಂಕಾಳ ಪತಿ ಅಂದ್ರೆ ಆರೋಪಿಯ ಮಗ ಪೊಲೀಸ್ ಕಾನ್ ಸ್ಟೇಬಲ್. ಈ ಘಟನೆ ನಡೆದಾಗ ಮನೆಯಲ್ಲಿ ಯಾರೂ ಇರಲಿಲ್ಲ.
ಅಸಲಿಗೆ ಮನೆಯಲ್ಲಿ ಸೊಸೆಯಂದಿರು ಯಾವಾಗ್ಲೂ ಜಗಳ ಮಾಡ್ತಾ ಇದ್ದರು. ಇದರಿಂದ ಮನೆಯಲ್ಲೇ ಇರುತ್ತಿದ್ದ ಮಾವ ಬೇಸತ್ತು ಹೋಗಿದ್ದ. ಅದೊಂದು ದಿನ ಸೊಸೆಯಂದಿರ ಜಗಳ ಬಿಡಿಸಲು ಹೋಗಿದ್ದಾನೆ. ಈ ವೇಳೆ ಸೊಸೆ ಪ್ರಿಯಾಂಕಾ ಕಾಲಿನಿಂದ ಮಾವನಿಗೆ ಒದ್ದಿದ್ದಳು. ಈ ಘಟನೆ ನಡೆದಾಗಿನಿಂದ ಆರೋಪಿ ಮನನೊಂದಿದ್ದ. ಅದೇ ಬೇಜಾರಿನಲ್ಲಿ ಮಲಗಿದ್ದ. ಮಾರನೇ ದಿನ ಕೋಪಗೊಂಡ ಆರೋಪಿ ಸೊಸೆ ಪ್ರಿಯಾಂಕಾಳ ರುಂಡ ಕಡಿದು ಕೊಲೆ ಮಾಡಿದ್ದಾನೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಪ್ರೊಡ್ಯೂಸ್ ಮಾಡಿ ಜೈಲಿಗೆ ಕಳುಹಿಸಿದ್ದಾರೆ.