New Delhi: ನಿಮ್ಮ ಆಧಾರ್ ಕಾರ್ಡ್ (Aadhaar card) ಹಾಗೂ ಪ್ಯಾನ್ ಕಾರ್ಡ್(Pan Card) ಲಿಂಕ್ ಆಗಿದೆಯಾ..? ಆಗಿದ್ರೆ ರಿಲ್ಯಾಕ್ಸ್ ಆಗಿ ಬಟ್ ಇನ್ನು ಕೂಡ ಲಿಂಕ್ ಆಗಿಲ್ಲ ಅಂದ್ರೆ ಕೂಡಲೇ ಈ ಕೆಲಸ ಮೊದಲು ಮಾಡಿ ಬಿಡಿ. ಯಾಕೆಂದ್ರೆ ಈ ಕೆಲಸ ಮಾಡಲು ಇಂದೇ ಕೊನೆ ದಿನ. ಆದಾಯ ತೆರಿಗೆ ಇಲಾಖೆಯು (Income Tax Departmenet) ಭಾರತದ ನಾಗರಿಕರಿಗೆ ತಮ್ಮ ಪ್ಯಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡುವಂತೆ ಪದೇ ಪದೇ ಹೇಳುತ್ತಲೇ ಇದೆ.
ಆಲ್ ಮೋಸ್ಟ್ ಎಲ್ಲ ಕಡೆ ಆಧಾರ್ ಕಾರ್ಡ್ ಲಿಂಕ್ ಆಗುತ್ತಿತ್ತು. ಅದರಂತೆಯೇ ಪ್ಯಾನ್ ಕಾರ್ಡ್ ಗೂ ಲಿಂಕ್ ಮಾಡುವುದು ಕಡ್ಡಾಯ. ಹಲವು ಬಾರಿ ಲಿಂಕ್ ಮಾಡಲು ಗಡುವು ನೀಡಿದ್ದು, ದಿನಾಂಕ ಮುಂದು ಹೋಗುತ್ತಲೇ ಇತ್ತು. ಬಟ್ ಇದೀಗ ಜೂನ್ 30 ಅಂತಿಮ ಗಡುವು ಆಗಿದೆ.
ಕೊನೆ ದಿನ ತಾನೇ ಮಾಡಿದ್ರಾಯ್ತು ಅನ್ನೋರು ಈ ವಿಷಯ ಗಮನದಲ್ಲಿಟ್ಟುಕೊಳ್ಳಿ. ಒಂದು ವೇಳೆ ನಿಗದಿತ ಸಮಯದಲ್ಲಿ ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಲಿಂಕ್ ಮಾಡದೇ ಇದ್ದಲ್ಲಿ ಪ್ಯಾನ್ ಕಾರ್ಡ್ ನಿಷ್ಕ್ರೀಯವಾಗುತ್ತೆ. ಅಲ್ಲದೇ ದಂಡದ ರೂಪದಲ್ಲಿ 1000 ರೂಪಾಯಿ ಪಾವತಿ ಮಾಡಬೇಕಾಗುತ್ತದೆ.
ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಲಿಂಕ್ ಮಾಡುವುದು ಹೇಗೆ:
ಮೊದಲಿಗೆ ಆದಾಯ ತೆರಿಗೆ ಪೋರ್ಟಲ್ ಗೆ ಹೋಗಿ https://incometaxindiaefiling.gov.in/ ನಂತರ ನಿಮ್ಮ ವಿವರ ಫಿಲ್ ಮಾಡಿ. ಪಾಪ್ ಅಪ್ ಲಿಂಕ್ ನಲ್ಲಿ ನಿಮ್ಮ ಆಧಾರ್ ಲಿಂಕ್ ಆಯ್ಕೆಯಾಗಿರುತ್ತದೆ. ವಿಂಡೋ ಕಾಣದೇ ಇದ್ದರೆ ಮೆನು ಬಾರ್ ನಲ್ಲಿ ಪ್ರೋಫೈಲ್ ಸೆಟ್ಟಿಂಗ್ಸ್ ಗೆ ಹೋಗಿ ಲಿಂಕ್ ಆಧಾರ್ ಎಂದು ಕ್ಲಿಕ್ ಮಾಡಿ. ಆಧಾರ್ ನಲ್ಲಿರುವ ಪ್ಯಾನ್ ವಿವರ ಚೆಕ್ ಮಾಡಿ ನಂತರ ಲಿಂಕ್ ನೌ ಬಟನ್ ಕ್ಲಿಕ್ ಮಾಡಿ.