ನಯನಾ ಮಾಂಡೋವಿ ಎನ್ನುವ ಪಾಪಿ ತಾಯಿಯೊಬ್ಬಳು ತನ್ನ ಎರಡೂವರೆ ವರ್ಷದ ಕಂದಮ್ಮನನ್ನು ಕೊಂದ ಘಟನೆ ಗುಜರಾತ್ ನ ಸೂರತ್ ನಲ್ಲಿ ನಡೆದಿದೆ. ತನ್ನ ಮಗುವನ್ನು ಕೊಂದಿದ್ದು ಅಲ್ಲದೇ ಪೊಲೀಸರಿಗೆ ಮಗು ನಾಪತ್ತೆಯಾಗಿದೆ ಎಂದು ದೂರು ಕೊಟ್ಟಿದ್ದಾಳೆ. ಪೊಲೀಸರು ಕೂಡ ಪ್ರಕರಣ ದಾಖಲಿಸಿಕೊಂಡು ಸತತ ಮೂರು ದಿನಗಳ ಕಾಲ ಹುಡುಕಾಟ ನಡೆಸಿದ್ದಾರೆ. ಆದರೆ ಮಗು ಮಾತ್ರ ಸಿಕ್ಕೆ ಇಲ್ಲ್. ಈ ಬಗ್ಗೆ ಪೊಲೀಸರಿಗೆ ಅನುಮಾನ ಶುರುವಾಗಿದೆ. ಮಗುವಿನ ತಾಯಿಯನ್ನು ಶಂಕಿಸಿದ ಪೊಲೀಸರು ವರ್ಕೌಟ್ ಮಾಡಿದಾಗಲೇ ನೋಡಿ ಅಸಲಿಯತ್ತು ಬಯಲಿಗೆ ಬಂದಿದ್ದು.
ಮೊದಲಿಗೆ ನಯನಾ ಕೆಲಸ ಮಾಡುತ್ತಿದ್ದ ಕಟ್ಟಡದ ಸಿಸಿಟಿವಿಯನ್ನು ಪರಿಶೀಲನೆ ಮಾಡಿದಾರೆ. ಮಗು ಒಳಗೆ ಹೋಗೋದು ಕಂಡಿತ್ತು. ಆದರೆ ಮರಳಿ ಕಟ್ಟ್ಡದಿಂದ ಹೊರಬಂದಿದ್ದು ಮಾತ್ರ ಕಂಡಿಲ್ಲ. ಇದನ್ನ ಕೇಳಿದಾಗ ನಯನಾ ಮತ್ತೊಂದು ಕಥೆ ಕಟ್ಟಲು ಶುರು ಮಾಡಿದ್ಲು. ತನ್ನ ಲವರ್ ಮಗುವನ್ನು ಕಿಡ್ನ್ಯಾಪ್ ಮಾಡಿದ್ದಾನೆ ಎಂದು ಹೇಳಿದಳು. ಈ ಮಾಹಿತಿ ಸಿಕ್ಕ ನಂತರ ಪೊಲೀಸರು ಪ್ರಿಯಕರನ ವಿಚಾರಣೆ ನಡೆಸಿದ್ದಾರೆ. ಆದರೆ ಅವನೂ ಏನೂ ಮಾಡಿಲ್ಲ ಅನ್ನೋ ವಿಚಾರ ಗೊತ್ತಾಗುತ್ತೆ. ಕೊನೆಗೆ ತಾನೇ ತನ್ನ ಮಗುವನ್ನು ಕೊಲೆ ಮಾಡಿರೋದಾಗಿ ತಾಯಿ ಒಪ್ಪಿಕೊಂಡಿದ್ದಾಳೆ. ಆದರೆ ಶವವನ್ನು ಹೂತ ಜಾಗ ಮಾತ್ರ ಸರಿಯಾಗಿ ಹೇಳಲಿಲ್ಲ.
ಮೊದಲಿಗೆ ಶವವನ್ನು ಹುಂಡಿಯಲ್ಲಿ ಹೂತಿದ್ದೇನೆ ಎಂದು ಹೇಳಿದಳು. ಅಲ್ಲಿ ಅಗೆದು ನೋಡಿದಾಗ ಏನೂ ಪತ್ತೆಯಾಗಿಲ್ಲ. ನಂತರ ಶವವನ್ನು ಕೊಳಕ್ಕೆ ಎಸೆದಿರೋದಾಗಿ ಹೇಳಿದ್ಲು. ಆದ್ರೆ ಅಲ್ಲಿಯೂ ಏನೂ ಸಿಕ್ಕಿಲ್ಲ. ನಂತರ ಕಡಕ್ ಆಗಿ ಕೇಳಿದಾಗ ನಿರ್ಮಾಣ ಹಂತದ ಶೌಚಾಲಯ ಸ್ಥಳದಲ್ಲಿ ನಿರ್ಮಿಸಲಾದ ಗುಂಡಿಗೆ ಎಸೆದಿರೋದಾಗಿ ಹೇಳಿದ್ದಾಳೆ.
ಮಗುವಿನೊಂದಿಗೆ ಬಂದರೆ ಪ್ರಿಯಕರ ತನ್ನನ್ನು ಸೇರಿಸೋದಿಲ್ಲ ಎಂದು ಹೇಳಿದ್ದ. ಇದೇ ಕಾರಣಕ್ಕೆ ಮಗುವನ್ನು ಕೊಲೆ ಮಾಡಿದೆ. ಡೆಡ್ ಬಾಡಿ ಏನು ಮಾಡಬೇಕು ಎಂದು ಗೊತ್ತಾಗಲಿಲ್ಲ. ಅದಿಕ್ಕೆ ದೃಶ್ಯಂ ಸಿನಿಮಾ ನೋಡಿ ಅದರಂತೆಯೇ ಮಾಡಿರೋದಾಗಿ ಪೊಲೀಸರಿಗೆ ತಿಳಿಸಿದ್ದಾಳೆ.