ರಾಜ್ಯದಲ್ಲಿ ಮುಂಗಾರು (Monsoon) ಪ್ರವೇಶ ವಿಳಂಬವಾದ ಕಾರಣ ನೀರಿಗಾಗಿ ಜನ ಪರದಾಡುತ್ತಿದ್ದಾರೆ. ಕೆಲವು ಕಡೆ ಕಡಿಮೆ ಮಳೆಯಾದ್ರೆ, ಮತ್ತೆ ಕೆಲವು ಕಡೆ ಮಳೆಯ ಸುಳಿವೇ ಇಲ್ಲದಂತಾಗಿದೆ. ಕಾರಣ ಡ್ಯಾಂಗಳು ಖಾಲಿ ಖಾಲಿಯಾಗಿವೆ. ರಾಜ್ಯಕ್ಕೆ ನೀರಿನ ಕೊರತೆ ಉಂಟಾಗಿದೆ. ಹೀಗೆ ಆದರೆ ಬೆಂಗಳೂರಿಗೆ ನೀರಿನ ಕೊರತೆ ಎದುರಾಗುವ ಸಾಧ್ಯತೆ ಇದೆ. ದಿನದಿಂದ ದಿನಕ್ಕೆ ಕೆಆರ್ ಎಸ್ ನೀರಿನ ಮಟ್ಟ ಇಳಿಯುತ್ತಿದೆ.
ಜೂನ್ ತಿಂಗಳಲ್ಲಿ ನಿರೀಕ್ಷಿತ ಪ್ರಮಾಣದ ಮಳೆ ಆಗಲಿಲ್ಲ. ಜುಲೈ ತಿಂಗಳಲ್ಲಿ ಆರಂಭವಾಗಿದೆ ಆದ್ರೆ ಅಷ್ಟೊಂದು ಚುರುಕಾಗಿಲ್ಲ. ರಾಜ್ಯಕ್ಕೆ ಜೂನ್ ತಿಂಗಳಲ್ಲಿ ಆಗಬೇಕಾಗಿದ್ದಷ್ಟು ಮಳೆ ಕೂಡ ಆಗಿಲ್ಲ. ಹೀಗಾಗಿ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಈಗಾಗಲೇ ಅನೇಕ ಭಾಗಗಳಲ್ಲಿ ಹನಿ ನೀರಿಗೂ ಜನ ಪರದಾಡ್ತಾ ಇದ್ದಾರೆ.
ರಾಜ್ಯಕ್ಕೆ ಇಪ್ಪತ್ತು ಸೆಂ.ಮೀ ಮಳೆಯಾಗಬೇಕು. ಶೇ. 53 ರಷ್ಟು ಮಳೆಯ ಕೊರತೆ ಇದೆ. ಕರಾವಳಿ ಭಾಗದಲ್ಲಿಯೂ ಹೆಚ್ಚಿನ ಮಳೆಯಾಗಬೇಕಿತ್ತು. ಆದರೆ ಅಲ್ಲಿಯೂ ಕಡಿಮೆ ಮಳೆಯಾಇದೆ. ಉತ್ತರ ಒಳನಾಡಿಗೆ ಹಾಗೂ ದಕ್ಷಿಣ ಒಳನಾಡಿಗೆ 11 ರಿಂದ 15 ಸೆಂ. ಮೀ ಮಳೆ ಆಗಬೇಕಿತ್ತು. ಆದರೆ ಕೇವಲ ಏಳು ಸೆಂ.ಮೀ ಮಳೆಯಾಗಿದೆ.