ದೆಹಲಿ: ಮದುವೆ ಮನೆ ಸೂತಕದ ಮನೆಯಾಗಿದೆ. ಜುಲೈ 3 ರಂದು ಹಸಮಣೆ ಏರಬೇಕಾದವನು ರಕ್ತದ ಮಡುವಿನಲ್ಲಿ ಮಲಗಿದ್ದಾನೆ. ಹಳೆಯ ವೈಷಮ್ಯಕ್ಕೆ 22 ವರ್ಷದ ಯುವಕನನ್ನು ಇಬ್ಬರು ಕೊಲೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಜುಲೈ 3 ರಂದು ಆಶಿಶ್ ಎನ್ನುವವನ ಮದುವೆಯಾಗಬೇಕಿತ್ತು. ಆದರೆ ಇಬ್ಬರು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.
ಕೊಲೆ ಮಾಡುವ ಜಾಗಕ್ಕೆ ಕರೆದುಕೊಂಡು ಹೋಗಿರುವುದು ಸಿಸಿಟಿಯಲ್ಲಿ ಕ್ಯಾಪ್ಚರ್ ಆಗಿದೆ ಎಂದು ಸಹೋದರಿ ತಮನ್ನಾ ತಿಳಿಸಿದ್ದಾಳೆ. ಇಬ್ಬ್ರು ಹುಡುಗರು ನನ್ನ ಅಣ್ಣನ ಶರ್ಟ್ ಎಳೆದು ಸ್ಕೂಟರ್ ಮೇಲೆ ಕೂರಿಸಿಕೊಂಡು ಕರೆದುಕೊಂಡು ಹೋಗಿದ್ದಾರೆ. ಇದೆಲ್ಲವೂ ಸಿಸಿಟಿಯಲ್ಲಿ ಸೆರೆಯಾಗಿದೆ ಎಂದು ಪೊಲೀಸರಿಗೆ ತಿಳಿಸಿದ್ದಾಳೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದರೂ ಅರ್ಧ ಗಂಟೆಯವರೆಗೂ ಯಾರೂ ಸಹಾಯಕ್ಕೆ ಬಂದಿಲ್ಲ. ಜನರು ವಿಡಿಯೋಗಳನ್ನು ಮಾಡುತ್ತಾರೆ. ಪೊಲೀಸರು ಕೂಡ ಕೋಲಿನಿಂದ ಅಲುಗಾಡಿಸುತ್ತಾ ನೋಡುತ್ತಿದ್ದರು. ಆದರೆ ಆಶಿಶ್ ನನ್ನು ಆಸ್ಪತ್ರೆಗೆ ಮಾತ್ರ ಕರೆದುಕೊಂಡು ಹೋಗುವ ಪ್ರಯತ್ನ ಮಾಡಿಲ್ಲ.
ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆರೋಪಿಗಳು ಆಶಿಶ್ ನನ್ನು ಬಹಳ ಸಮಯದಿಂದ ಹಿಂಬಾಲಿಸುತ್ತಿದ್ದರು. ಪ್ರತೀಕಾರ ತೀರಿಸಿಕೊಳ್ಳಲು ಈ ಕೊಲೆ ಮಾಡಿದ್ದಾರೆ ಅನ್ನೋ ಮಾಹಿತಿ ತಿಳಿದುಬಂದಿದೆ.