PUBG LOVE STOTY: ಪಾಕಿಸ್ತಾನಿ ಮಹಿಳೆಯೊಬ್ಬಳು ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಳೆ. ಕೇವಲ ತಾನೊಬ್ಬಳೇ ಅಲ್ಲ ಬದಲಿಗೆ ತನ್ನ ನಾಲ್ಕು ಮಕ್ಕಳನ್ನು ಭಾರತಕ್ಕೆ ಕರೆದುಕೊಂಡು ಬಂದಿದ್ದಾಳೆ. ಇವಳು ಅಕ್ರಮವಾಗಿ ಭಾರತಕ್ಕೆ ಬರಲು ಕಾರಣ ಲವ್.
ಆನ್ ಲೈನ್ ಗೇಮಿಂಗ ಪಬ್ ಜೀಯಲ್ಲಿ ಶುರುವಾಗಿತ್ತು ಪ್ರೀತಿ. ಗೇಮ್ ಆಡುತ್ತ ಆಡುತ್ತ ಒಬ್ಬ ಹುಡುಗನ ಜೊತೆ 27 ವರ್ಷದ ಮಹಿಳೆಗೆ ಲವ್ ಆಗಿ ಬಿಟ್ಟಿದೆ. ತನ್ನ ಲವರ್ ನನ್ನು ನೋಡಲು ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಳೆ.
ಗ್ರೇಟರ್ ನೋಯ್ಡಾ ನಿವಾಸಿ ಸಚಿನ್ ಹಾಗೂ ಪಾಕಿಸ್ತಾನ ಮೂಲದ ಸೀಮಾ ಎನ್ನುವವರು ಪಬ್ ಜೀ ಆಟವಾಡ್ತಾ ಇದ್ರು. ಹೀಗೆ ಆಡುತ್ತ ಇಬ್ಬರಿಗೂ ಪರಿಚಯವಾಗಿದೆ. ಪರಿಚಯ ಪ್ರೀತಿಗೆ ತಿರುಗಿದೆ. ಇದೀಗ ಸೀಮಾ ನೇಪಾಳ ಮಾರ್ಗವಾಗಿ ತನ್ನ ನಾಲ್ಕು ಮಕ್ಕಳೊಂದಿಗೆ ಗ್ರೇಟರ್ ನೋಯ್ಡಾಗೆ ಬಂದಿದ್ದಾಳೆ.
27 ವರ್ಷದ ಸೀಮಾ ತನ್ನ ನಾಲ್ಕು ಜನ ಮಕ್ಕಳೊಂದಿಗೆ ಮೇ ತಿಂಗಳಿನಲ್ಲಿ ಕರಾಚಿಯಿಂದ ದುಬೈ ಹಾಗೂ ಕಟ್ಮಂಡುವಿಗೆ ಸಂಪರ್ಕ ಕಲ್ಪಿಸುವ ವಿಮಾನಕ್ಕೆ ಹೋರಟಿದ್ದಾಳೆ. ಬಳಿಕ ನೇಪಾಳದಿಂದ ಬಸ್ ಹತ್ತಿ ಅಕ್ರಮವಾಗಿ ಭಾರತೀಯ ಗಡಿ ದಾಟಿದ್ದಾಳೆ. ಮಕ್ಕಳ ಜೊತೆ ಪ್ರಯಾಣ ಮಾಡುತ್ತಿದ್ದ ಕಾರಣ ಈಕೆಯ ಮೇಲೆ ಯಾರಿಗೂ ಅನುಮಾನ ಬಂದಿಲ್ಲ. ಫೈನಲಿ ಗ್ರೇಟರ್ ನೋಯ್ಡಾಗೆ ಬಂದು ಇಳಿದಿದ್ದಾಳೆ.
ಅಸಲಿಗೆ ಸೀಮಾಳ ಪ್ರೇಮಿ ಸಚಿನ್ 22 ವರ್ಷದವನು. ಕಿರಾಣಿ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದಾನೆ. ಈ ಜೋಡಿ ಮದುವೆಯಾಗಲು ಸಿದ್ದರಾಗಿದ್ದರು. ಆದರೆ ವಕೀಲರೊಬ್ಬರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಜೋಡಿ ಹರಿಯಾಣದ ಬಲ್ಲಭಗಡಕ್ಕೆ ತೆರಳುತ್ತಿದ್ದ ವೇಳೆ ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ. ಹಾಗೂ ವಿಚಾರಣೆ ನಡೆಸುತ್ತಿದ್ದಾರೆ.

