ಪ್ರತಿಯೊಬ್ಬರಿಗೂ ಹಣ ಬೇಕು. ಅದೂ ಸುಲಭದಲ್ಲಿ. ಕಡಿಮೆ ಕೆಲಸ ಇರಬೇಕು. ಕೈ ತುಂಬಾ ಕೆಲಸ ಬೇಕು. ಆಹಾ ಕೇಳೋದಕ್ಕೆ ಎಷ್ಟು ಚೆನ್ನಾಗಿ ಇದೆ ಅಲ್ವಾ. ಇಂತಹ ಕೆಲಸ ಯಾರಿಗೆ ತಾನೇ ಬೇಡ ಹೇಳಿ. ಇದೇ ರೀತಿಯ ಕೆಲಸಗಳು ಇಲ್ಲಿವೆ ನೋಡಿ…
ವಿಶ್ವದ ಈ ನಾಲ್ಕು ಜಾಗಗಳಲ್ಲಿ ಕಡಿಮೆ ಕೆಲಸ ಮಾಡಿ ಲಕ್ಷಾಂತರ ಹಣ ಗಳಿಸಬಹುದು. ನೂಯಾರ್ಕ್ ನಲ್ಲಿ ಗೋಡಿವಾ ಎನ್ನುವ ಒಂದು ಚಾಕಲೇಟ್ ಕಂಪನಿ ಇದೆ. ಈ ಕಂಪನಿಯಲ್ಲಿ ಹೆಚ್ಚು ಕೆಲಸ ಮಾಡಬೇಕಾಗಿಲ್ಲ. ಜಸ್ಟ್ ಚಾಕಲೇಟ್ ವಾಸನೆ ನೋಡಿದ್ರೆ ಸಾಕು. ಹೌದು ಚಾಕಲೇಟ್ ವಾಸನೆ ನೋಡಿ ಪ್ರತಿಕ್ರಿಯೆ ಕೊಡುವ ವ್ಯಕ್ತಿಗೆ ಕಂಪನಿಯು 25 ರಿಂದ 50 ಲಕ್ಷ ಹಣವನ್ನು ನೀಡುತ್ತದೆ.

ಇನ್ನು ವಾಟರ್ ಸ್ಲೈಡರ್ ಪರೀಕ್ಷಕರು ಅಗತ್ಯವಿರುವ ವಿಶ್ವದಾದ್ಯಂತ ಅನೇಕ ನಗರಗಳಿವೆ. ವಾಟರ್ ಸ್ಟ್ರಿಂಗ್ ನಲ್ಲಿ ಎಷ್ಟು ಇಳಿಜಾರು ಇದೆ ಎಂದು ಪರೀಕ್ಷೆ ಮಾಡುವ ಉದ್ಯೋಗಿ ನೀರಿನ ಮಟ್ಟ ಪರೀಕ್ಷೆ ಮಾಡಿದ್ರೆ ಸಾಕು. ಆತನಿಗೆ 25 ಲಕ್ಷಕ್ಕೂ ಹೆಚ್ಚು ನೀಡುತ್ತಾರೆ.

ಬ್ರಿಟನ್ ನಲ್ಲಿ ಒಂದು ಹಾಸಿಗೆ ಕಂಪನಿ ಇದೆ. ಈ ಕಂಪನಿಯಲ್ಲಿ ಹಾಸಿಗೆಯ ಗುಣಮಟ್ಟ ಪರೀಕ್ಷೆ ಮಾಡಲು ಜನರನ್ನು ನೇಮಿಸಿಕೊಳ್ತಾರೆ. ನಂತರ ಅವರಿಗೆ ಲಕ್ಷಾಂತರ ರೂಪಾಯಿ ಕೊಡ್ತಾರೆ. ಮಲಗೋದಕ್ಕು ಇಲ್ಲಿ ಸಿಗುತ್ತೆ ಹಣ.


