ಜಮೀನು ವಿವಾದಕ್ಕೆ ಸ್ಯಾಂಡಲ್ ವುಡ್ ನಟಿ ಅನು ಗೌಡರ ಮೇಲೆ ಹಲ್ಲೆ ನಡೆದಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಾಗರ ತಾಲೂಕಿನ ಕಸ್ಪಾಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸದ್ಯ ಅನುಗೌಡ ಸಾಗರ ತಾಲೂಕಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನೀಲಮ್ಮ ಹಾಗೂ ಮೋಹನ್ ಎನ್ನುವವರು ಜಮೀನು ವಿಚಾರಕ್ಕೆ ಅನುಗೌಡ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಅನುಗೌಡ ಪೋಷಕರು ಕಾಸ್ಪಾಡಿಯಲ್ಲಿ ಕೃಷಿ ಮಾಡುತ್ತಿದ್ದಾರೆ. ಅನುಗೌಡ ಆಗ್ಗಾಗ್ಗೆ ಬೆಂಗಳೂರಿನಿಂದ ಊರಿಗೆ ಹೋಗುತ್ತಿದ್ದರು. ಈ ನಡುವೆ ಗಲಾಟೆಯಾಗಿ ಅನುಗೌಡ ಮೇಲೆ ಹಲ್ಲೆ ನಡೆದಿದೆ. ಈ ಬಗ್ಗೆ ಸಾಗರ ತಾಲೂಕಿನ ಆನಂದಪುರ ಪೊಲೀಸ್ ಟಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅನುಗೌಡ ಅನೇಕ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ಕನ್ನಡ ಚಿತರಂಗದಲ್ಲಿ ತಮ್ಮದೇ ಹೆಸರು ಮಾಡಿದ್ದಾರೆ. ಜಮೀನು ವಿಚಾರವಾಗಿ ಅನುಗೌಡರ ಪೋಷಕರ ಹಾಗೂ ಸ್ಥಳೀಯರ ನಡುವೆ ವ್ಯಾಜ್ಯವಿತ್ತು. ಇದೇ ವಿಚಾರಕ್ಕೆ ಸ್ಥಳೀಯ ನಿವಾಸಿಗಳು ಹಲ್ಲೆ ನಡೆಸಿದ್ದಾರೆ.

