ಬೇರೊಬ್ಬ ಹೆಂಗಸಿನ ಜೊತೆ ತನ್ನ ತಂದೆಯ ರಾಸಲೀಲೆಯ ವಿಡಿಯೋ ನೋಡಿದ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ನಡೆದಿದ್ದು ದಕ್ಶಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯಲ್ಲಿ. ಸ್ಥಳೀಯ ಯುವಕನೊಬ್ಬ ಈ ವಿಡಿಯೋ ವೈರಲ್ ಮಾಡಿದ್ದಾನೆ. ನಂತರ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ಲೀಕ್ ಮಾಡಿದ್ದಾನೆ. ಇದರಿಂದ ಮುಜುಗರಕ್ಕೆ ಇಳಗಾದ ಮಗ ತಂದೆಯ ಜೊತೆ ಜಗಳ ಮಾಡಿದ್ದಾನೆ. ಕುಟುಂಬದ ಮರ್ಯಾದೆ ಹಾಳಾಯ್ತು ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಮಾಡಿದ ಆರೋಪಿ ಜಯಕುಮಾರ ನನ್ನು ಪೊಲೀಸರು ಬಂಧಿಸಿದ್ದಾರೆ. ಅಸಲಿಗೆ ಆತ್ಮಹತ್ಯೆ ಮಾಡಿಕೊಂಡ ಯುವಕನ ತಂದೆ ನಿರ್ಜನ ಪ್ರದೇಶದಲ್ಲಿ ದೈಹಿಕ ಸಂಪರ್ಕದಲ್ಲಿ ತೊಡಗಿದ್ದ. ಇದೇ ವೇಳೆ ಸ್ಥಳೀಯನೊಬ್ಬ ವಿಡಿಯೋ ಮಾಡಿಕೊಂಡಿದ್ದ. ಅಷ್ಟೇ ಅಲ್ಲ ಇಬ್ಬರ ಮುಖ ಕಾಣುವಂತೆಯೇ ಬ್ಲರ್ ಮಾಡದೇ ಹಾಗೆಯೇ ಸಾಮಾಜಿಕ ಜಾಲತಾಣದಲ್ಲಿ ಆ ವಿಡಿಯೋವನ್ನು ಶೇರ್ ಮಾಡಿದ್ದಾನೆ.
ವಿಡಿಯೀ ಶೇರ್ ಮಾಡಿದ ನಾಲ್ಕೇ ದಿನಕ್ಕೆ ಕರಾವಳಿಯಾದ್ಯಂತ ವಿಡಿಯೋ ಹರಿದಾಡಿದೆ. ಈ ವಿಡಿಯೋ ನೋಡಿದ ಪರಿಚಯಸ್ಥರು ಆಡಿಕೊಂಡಿದ್ದಾರೆ. ತಂದೆ ಮಾಡಿದ ತಪ್ಪಿಗೆ ಮಕ್ಕಳು ಬೇರೆಯವರ ಬಳಿ ಅನ್ನಿಸಿಕೊಳ್ಳಬೇಕು ಎಂದು ಮಗ ಮನನೊಂದಿದ್ದ.