Uttar Pradesh: ತನ್ನ ಗೆಳತಿಗಾಗಿ ಪತ್ನಿಯ ಮೂಗು ಕತ್ತರಿಸಿ ಜೇಬಿನಲ್ಲಿ ಇಟ್ಕೊಂಡು ಪರಾರಿಯಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಲಖಿನಂಪುರ್ ಖೇರಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ತೀವ್ರ ರಕ್ತಸ್ರಾವ ಆಗ್ತಾ ಇದ್ರು ಪೊಲೀಸ್ ಟಾಣೆಗೆ ಹೋದ ಪತ್ನಿ ತನ್ನ ಪತಿಯ ವಿರುದ್ದ ದೂರು ಕೊಟ್ಟಿದ್ದಾಳೆ. ಮೂಗು ಕಟ್ ಮಾಡಿದ ಪತಿಯ ಹೆಸರು ವಿಕ್ರಮ್. ಈತನ ಪತ್ನಿಯ ಹೆಸರು ಸೀಮಾ ದೇವಿ. ಇಬ್ಬರಿಗೂ ಮದುವೆಯಾಗಿ ಹನ್ನೆರಡು ವರ್ಷಗಳು ಕಳೆದಿವೆ. ಇಬ್ಬರು ಮಕ್ಕಳೊಂದಿಗೆ ದಂಪತಿ ಉತ್ತರ ಪ್ರದೇಶದ ಲಖಿನಂಪುರ್ ಖೇರಿ ಜಿಲ್ಲೆಯ ಮಿಥೌಲಿಯಲ್ಲಿ ವಾಸವಾಗಿದ್ದರು.
ವಿಕ್ರಂ ಇತ್ತೀಚೆಗೆ ಬೇರೊಬ್ಬ ಮಹಿಳೆಯ ಜೊತೆ ಅಕ್ತಮ ಸಂಬಂಧ ಹೊಂದಿದ್ದ. ಈ ವಿಚಾರ ಸೀಮಾದೇವಿಗೆ ಗೊತ್ತಾಗಿತ್ತು. ವಿಚಾರ ಗೊತ್ತಾದ ಮೇಲೆ ಇಬ್ಬರ ನಡುವೆ ಜಗಳವಾಗಿತ್ತು. ಹೀಗೆ ಇಬ್ಬರ ನಡುವೆ ಜಗಳವಾಗುತ್ತಿದ್ದ ಸಮಯದಲ್ಲಿ ಪಕ್ಕದಲ್ಲಿಯೇ ಮಗು ಮೊಬೈಲ್ ನೋಡುತ್ತಿತ್ತು. ವಿಕ್ರಂ ಮೊಬೈಲ್ ಕೊಡುವಂತೆ ಕೇಳಿದ್ದಾನೆ. ಆದರೆ ಮಗು ಮಾತ್ರ ಮೊಬೈಲ್ ಕೊಟ್ಟಿಲ್ಲ. ಮೊದಲೇ ಸಿಟ್ಟಿನಲ್ಲಿದ್ದ ವಿಕ್ರಂ ಮಗುವಿಗೆ ಹೊಡೆದಿದ್ದಾನೆ. ಇದನ್ನು ತಡೆಯಲು ಸೀಮಾದೇವಿ ಹೋದಾಗ ಅಲ್ಲಿಯೇ ಇದ್ದ ಚಾಕುವನ್ನು ತೆಗೆದುಕೊಂಡು ಆಕೆಯ ಮೂಗು ಕೂಯ್ದಿದ್ದಾನೆ.
ಸೀಮಾಳ ಕಿರುಚಾಟ ಕೇಳಿ ಅಕ್ಕ ಪಕ್ಕದವರು ಓಡಿ ಬಂದಿದ್ದಾರೆ. ಇದರಿಂದ ಗಾಬರಿಗೊಂಡ ವಿಕ್ರಂ ಕತ್ತರಿಸಿದ ಮೂಗನ್ನು ಜೀಬಿನಲ್ಲಿ ಇಟ್ತುಕೊಂಡು ಎಸ್ಕೇಪ್ ಆಗಿದ್ದಾನೆ. ಇದೀಗ ಪ್ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಕ್ರಂಗಾಗಿ ಹುಡುಕಾಟ ನಡೆಸುತ್ತಿದ್ದಾರೆ.