ಬಿಜೆಪಿ ಕಾರ್ಯಕರ್ತನೊಬ್ಬ ಮದ್ಯದ ಅಮಲಿನಲ್ಲಿ ಮಾಡಿದ ಕೃತ್ಯದ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಈ ವಿಡಿಯೋ 9 ದಿನಗಳ ಹಳೆಯದ್ದು ಅಂತ ಹೇಳಲಾಗುತ್ತಿದೆ. ಬಿಜೆಪಿ ಕಾರ್ಯಕರ್ತ ಪ್ರವೇಶ್ ಶುಕ್ಲಾ ಕುಬ್ರಿ ಗ್ರಾಮದ ನಿವಾಸಿ. ಈತ ಸಿಧಿ ಜಿಲ್ಲೆಯ ಬಿಜೆಪಿ ಶಾಸಕ ಪಂಡಿತ್ ಕೇದಾರನಾಥ್ ಶುಕ್ಲಾ ಅವರ ಬೆಂಬಲಿಗ ಎಂದು ಹೇಳಲಾಗಿದೆ. ಅಲ್ಲದೇ ಸಿಧಿ ಎಸ್ಪಿ ರವೀಂದ್ರ ವರ್ಮಾ ಖುದ್ದು ಈ ವಿಡಿಯೋವನ್ನು ಟ್ವಿಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿರುವ ಈ ವಿಡಿಯೋವನ್ನು ಪರಿಶೀಲನೆ ನಡೆಸಿದ ನಂತರವೇ ಪ್ರವೇಶ್ ಶುಕ್ಲಾ ವಿರುದ್ದ ಪ್ರಕರಣ ದಾಖಲಿಸಿಲಾಗಿದೆ ಎಂದು ಹೇಳಿದ್ದಾರೆ.
ಇನ್ನು ಈ ಬಗ್ಗೆ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಪ್ರತಿಕ್ರಿಯೆ ನೀಡಿದ್ದಾರೆ. ತಪ್ಪೌ ಯಾರೇ ಮಾಡಿದ್ರು ಕ್ಷಮೆ ಅನ್ನು ಪ್ರಶ್ನೆಯೇ ಇಲ್ಲ. ಈ ರೀತಿ ನಡೆದುಕೊಂಡ ವ್ಯಕ್ತಿಯ ವಿರುದ್ದ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
ಇನ್ನು ಈ ಬಗ್ಗೆ ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕಮಲನಾಥ್ ಈ ರೀತಿ ಹೇಳಿದ್ದಾರೆ. ಬುಡಕಟ್ಟು ಯುವಕನೊಂದಿಗೆ ನಡೆದುಕೊಂಡ ವ್ಯವಹಾರ ಸರಿ ಅಲ್ಲ. ಅದರಲ್ಲಿಯೂ ಆತ ಮಾನಸಿಕ ಅಸ್ವಸ್ಥ. ಆದಿವಾಸಿಗಳ ದೌರ್ಜನ್ಯದಲ್ಲಿ ಈಗಾಗಲೇ ಮಧ್ಯಪ್ರದೇಶ ಮೊದಲನೇ ಸ್ಥಾನದಲ್ಲಿದೆ. ಪೂರ್ತಿ ಮಧ್ಯಪ್ರದೇಶ ತಲೆತಗ್ಗಿಸುವಂತಹ ಕೆಲಸ ನಡೆದಿದೆ. ತಪ್ಪಿತಸ್ಥರ ವಿರುದ್ದ ಕ್ರಮ ಜರುಗಿಸಲೇಬೇಕು.
ಆದರೆ ಈ ಘಟನೆ ನಡೆದ ನಂತರ ಪ್ರತಿಕ್ರಿಯೆ ನೀಡಿದ ಶಾಸಕ ಕೇದಾರ್ ನಾಥ್ ಶುಕ್ಲಾ, ಆರೋಪಿ ನನ್ನ ಬೆಂಬಲಿಗನಲ್ಲ. ನನ್ನ ಪ್ರತಿನಿಧಿಯೂ ಅಲ್ಲ ಎಂದು ತಿಳಿಸಿದ್ದಾರೆ.