Kornersite

Crime Just In Karnataka State

ಗರ್ಲ್ ಫ್ರೆಂಡ್ ಶೋಕಿಗಾಗಿ ಹೈಟೆಕ್ ಬೈಕ್ ಕಳ್ಳತನ

ಗಲ್ ಫ್ರೆಂಡ್ಸ್ (Girlfriend) ಶೋಕಿಗಾಗಿ, ಅವರನ್ನು ಮೆಚ್ಚಿಸಲು ಹೈಟೆಕ್ ಬೈಕ್ (Bike) ಗಳನ್ನು ಕದಿಯುತ್ತಿದ್ದ ಅಂತಾರಾಜ್ಯ ಕಳ್ಳರನ್ನು ಯಾದಗಿರಿ (Yadgiri) ಪೊಲೀಸರು ಬಂಧಿಸಿದ್ದಾರೆ.

ಯಾದಗಿರಿ, ಶಹಾಪೂರ ಸೇರಿದಂತೆ ಯಾದಗಿರಿ ಭಾಗದಲ್ಲಿ ಪದೇ ಪದೇ ಬೈಕ್ ಗಳು ಕಳ್ಳತನವಾಗುತ್ತವೇ ಇದ್ದವು. ಈ ಬಗ್ಗೆ ಪೊಲೀಸರಿಗೆ ದೂರು ಬಂದಿದ್ದವು. ಈ ಪ್ರಕರಣ ಬೆನ್ನತ್ತಿದ ಕೆಂಭಾವಿ ಪೊಲೀಸರು ಇಬ್ಬರು ಅಂತಾರಾಜ್ಯ ಬೈಕ್ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರೆ. ಅಸಲಿಗೆ ಕೆಂಭಾವಿ ಪೊಲೀಸ್ ಟಾಣೆಯ ಪಿಎಸ್ ಐ ಗಸ್ತಿನಲ್ಲಿದ್ದಾಗ, ಇಬ್ಬರು ಯುವಕರು ಅನುಮಾನಾಸ್ಪದವಾಗಿ ಬೈಕ್ ತೆಗೆದುಕೊಂಡು ಹೋಗುತ್ತಿದ್ದರು. ಕೂಡಲೇ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಸಲಿಯತ್ತು ಬಯಲಾಗಿದೆ.

ವಿಚಾರಣೆ ವೇಳೆ ಒಬ್ಬ ಆರೋಪಿ ಹುಣಸಗಿ ತಾಲೂಕಿನ ಕನಗಂಡನಹಳ್ಳಿ ತಾಂಡ ನಿವಾಸಿ ಮತ್ತು ಮತ್ತೊಬ್ಬ ಸುರಪುರ ತಾಲೂಕಿನ ಪೀರಾ ನಾಯಕ ತಾಂಡಾದವನು ಎಂದು ತಿಳಿದು ಬಂದಿದೆ. ಇಬ್ಬರೂ ಸೇರಿ ಬರೋಬ್ಬರಿ 20 ಬೈಕ್ ಕದ್ದು ಮಾರಾಟ ಮಾಡಲು ಪ್ಲ್ಯಾನ್ ಮಾಡಿದ್ದರು.

ಈ ಎಲ್ಲ ಬೈಕ್ ಗಳನ್ನು ಮಾರಾಟ ಮಾಡಿ ಶೋಕಿ ಜೀವನ ನಡೆಸಲು ಮುಂದಾಗಿದ್ದರು ಎಂದು ತಿಳಿದು ಬಂದಿದೆ. ಇಬ್ಬರಿಗೂ ಗಲ್ ಫ್ರೆಂಡ್ ಇದ್ದಾರೆ. ಹಣ ಇಲ್ಲದೇ ಇದ್ದಾಗ ಗಲ್ ಫ್ರೆಂಡ್ಸ್ ನ್ನ ನಿಭಾಯಿಸೋದು ಕಷ್ಟ ಆಗಿತ್ತು. ಹೀಗಾಗಿ ಈ ಕಳ್ಳತನ ಮಾಡಿದ್ದು ಎಂದು ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾರೆ.

You may also like

Crime Karnataka State

ಕೊಲೆಯಲ್ಲಿ ಅಂತ್ಯವಾದ ವ್ಹೀಲಿಂಗ್ ಗಲಾಟೆ

ಹಾಸನ : ವ್ಹೀಲಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜಿಲ್ಲೆಯ ಗವೇನಹಳ್ಳಿಯಲ್ಲಿ ನಡೆದಿದೆ.ಘಟನೆಯಲ್ಲಿ ಆಟೋ ಚಾಲಕ ಸುಮಂತ್ (20) ಕೊಲೆಯಾದ ದುರ್ದೈವ ಯುವಕ.
Crime

ಬೈಕ್ ನಲ್ಲಿಯೇ ಸಹೋದರಿಯ ಶವ ಸಾಗಿಸಿದ ಅಣ್ಣ!

ನವದೆಹಲಿ : ಆಂಬುಲೆನ್ಸ್ ಬರುವುದಕ್ಕೆ ನಿರಾಕರಿಸಿರುವ ಹಿನ್ನೆಲೆಯಲ್ಲಿ ಯುವಕನೊಬ್ಬ ತನ್ನ ಸಹೋದರಿಯ ಮೃತ ದೇಹವನ್ನು ಬೈಕ್ ನಲ್ಲಿಯೇ ತೆಗೆದುಕೊಂಡು ಹೋಗಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಕೌಶಾಂಬಿಯಲ್ಲಿ