Kornersite

Extra Care Just In Relationship

ಪತಿ-ಪತ್ನಿ ಆಷಾಡದಲ್ಲಿ ದೂರವಿರಬೇಕು ಯಾಕೆ..? ಕಾರಣ ನಿಮಗೆ ಗೊತ್ತಾ..?

ಹೊಸದಾಗಿ ಮದುವೆಯಾಗಿರುವ ದಂಪತಿ ಆಷಾಡ ಮಾಸದಲ್ಲಿ ಒಟ್ಟಿಗೆ ಇರಬಾರದು ಎಂದು ಹಿರಿಯರು ಹೇಳ್ತಾರೆ. ಆದರೆ ಹೀಗೆ ಹೇಳೋದಕ್ಕು ಕಾರಣ ಇದೆ. ಆ ಕಾರಣ ಏನು ಅನ್ನೋದನ್ನ ನೋಡೋಣ ಬನ್ನಿ.

ಆಷಾಡ ಮಾಸದಲ್ಲಿ ಯಾವುದೇ ರೀತಿಯ ಶುಭ ಸಮಾರಂಭಗಳನ್ನು ಮಾಡುವುದಿಲ್ಲ್. ಹೊಸ ಕೆಲಸವನ್ನು ಪ್ರಾರಂಭ ಕೂಡ ಮಾಡುವುದಿಲ್ಲ. ಆಷಾಡ ಮಾಸವು ಸಾಮಾನ್ಯವಾಗಿ ಜೂನ್-ಜುಲೈ ತಿಂಗಳಲ್ಲಿ ಬರುತ್ತದೆ. ಈ ಅವಧಿಯಲ್ಲಿ ಮದುವೆ, ಗೃಹ ಪ್ರವೇಶ, ಮುಂಡನ ಹೀಗೆ ಯಾವುದೇ ರೀತಿಯ ಶುಭ ಸಮಾರಂಭಗಳನ್ನು ಮಾಡುವುದಿಲ್ಲ್.

ಆಷಾಡ ಮಾಸದಲ್ಲಿ ದಂಪತಿ ಯಾಕೆ ಸೇರುವುದಿಲ್ಲ..?

ಸಾಂಪ್ರದಾಯಿಕ ನಂಬಿಕೆಯ ಪ್ರಕಾರ ನವ ದಂಪತಿ ಆಷಾಡ ಮಾಸದಲ್ಲಿ ಒಟ್ಟಿಗೆ ಇರಬಾರದು. ಪತ್ನಿಯನ್ನು ತವರು ಮನೆಗೆ ಕಳುಹಿಸುವ ವಾಡಿಕೆ ಇದೆ. ಒಂದು ವೇಳೆ ಅತ್ತೆ ಮನೆಯಲ್ಲೇ ಆಷಾಡ ಮಾಸದಲ್ಲಿ ಇದ್ದರೆ ಅತ್ತೆ-ಸೊಸೆಯ ಜಗಳ ಆಗುತ್ತೆ ಅನ್ನುವ ನಂಬಿಕೆ ಇದೆ. ಇನ್ನೊಂದು ವಾಡಿಕೆ ಅಂದರೆ ಆಷಾಡ ಮಾಸದಲ್ಲಿ ಗಂಡ ಹೆಂಡತಿ ಸೇರಿದಾಗ, ಪತ್ನಿ ಗರ್ಭವತಿಯಾದರೆ ಚೈತ್ರ ಮಾಸದಲ್ಲಿ ಮಗುವಿನ ಜನನವಾಗುತ್ತದೆ. ಅದು ಬೇಸಿಗೆ ಕಾಲದ ಆಗಮನ. ಬೇಸಿಗೆಯ ಬಿಸಿ ದಿನಗಳಲ್ಲಿ ನವಜಾತು ಶಿಶುವಿಗೆ ಹಾಗೂ ತಾಯಿಗೆ ತೊಂದರೆಯಾಗುತ್ತದೆ. ಇದೇ ಕಾರಣಕ್ಕೆ ಆಷಾಡ ಮಾಸದಲ್ಲಿ ದಂಪತಿಗಳು ಒಟ್ಟಿಗೆ ಇರಬಾರದು ಎನ್ನುವ ನಂಬಿಕೆ ಇದೆ.

ಇನ್ನು ಹಲವು ಕಾರಣ ಹಾಗೂ ನಂಬಿಕೆಗಳು ಕೂಡ ಇವೆ. ಆಷಾಡ ಮಾಸದಲ್ಲಿ ರೈತಾಪಿ ವರ್ಗದವರಿಗೆ ಕೆಲಸ ಹೆಚ್ಚು ಇರುತ್ತದೆ. ನವವಿವಾಹಿತರು ಈ ಸಮಯದಲ್ಲಿ ಒಟ್ಟಿಗೆ ಇದ್ದರೆ ಕೆಲಸದ ಕಡೆ ಮಗನವಿರುವುದಿಲ್ಲ್.ಹೀಗೆ ಹಲವಾರು ಕಾರಣಗಳು ಇವೆ ಆಷಾಡ ಮಾಸದಲ್ಲಿ ದಂಪತಿ ಒಟ್ಟಿಗೆ ಇರಬಾರದು ಎಂದು.

You may also like

Extra Care Lifestyle

ಊಟ ಆದ್ಮೇಲೆ ಯಾವುದೇ ಕಾರಣಕ್ಕೂ ಈ ಕೆಲಸ ಮಾಡಬೇಡಿ

ನಾವು ಊಟಕ್ಕೆ ಎಷ್ಟು ಮಹತ್ವ ಕೊಡುತ್ತೇವೆ ಅಷ್ಟೇ ಪ್ರಾಮುಖ್ಯತೆಯನ್ನು ಊಟ(Food) ಆದ್ಮೇಲೆ ಏನು ಮಾಡ್ತೀವಿ ಅನ್ನೋದು ಮುಖ್ಯ. ಒಬ್ಬೊಬ್ಬರಿಗೆ ಒಂದೊಂದು ರೀತಿಯ ಅಭ್ಯಾಸ(Habbit) ಇರುತ್ತದೆ. ಕೆಲವರು ಊಟ
Just In Sports

ಹೋರಾಡಿ ಸೋತ ರಾಜಸ್ಥಾನ್ (Rajasthan) – ಸತತ ಎರಡನೇ ಜಯ ದಾಖಲಿಸಿದ ಪಂಜಾಬ್ (Punjab)

Guwahati: ನಾಯಕ ಶಿಖರ್‌ ಧವನ್‌ (Shikhar Dhawan), ಪ್ರಭ್‌ಸಿಮ್ರಾನ್‌ ಸಿಂಗ್‌ (Prabhsimran Singh) ಬ್ಯಾಟಿಂಗ್ ಹಾಗೂ ನಾಥನ್ ಎಲ್ಲಿಸ್ ಬೌಲಿಂಗ್‌ ದಾಳಿಯಿಂದಾಗಿ ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ