ಟೊಮೆಟೊ (Tomato) ದರ (Price)ಗಗನಕ್ಕೇರುತ್ತಿದ್ದಂತೆ ರೈತರು ಡಿಫರೆಂಟ್ ಐಡಿಯಾಗಳನ್ನು ಮಾಡ್ತಾ ಇದ್ದಾರೆ. ಈ ಹಿಂದೆ ಟೊಮೆಟೊ ವ್ಯಾಪಾರ ಮಾಡುವಾಗ ರೈತನೊಬ್ಬ ಸಿಸಿಟಿವಿ (CCTV) ಅಳವಡಿಸಿದ್ದನ್ನ ನೋಡಿದ್ದೇವು. ಆದರೆ ಇಲ್ಲೊಬ್ಬ ರೈತ (Farmer) ಯಾರೂ ಥಿಂಕ್ ಮಾಡಿರದ ರೀತಿ ಐಡಿಯಾ ಮಾಡಿದ್ದಾನೆ. ತಾನು ಟೊಮೆಟೊ ವ್ಯಾಪಾರ ಮಾಡುತ್ತಿರುವಾಗ ಇಬ್ಬರು ಬೌನ್ಸರ್ ಗಳನ್ನು ನಿಲ್ಲಿಸಿದ್ದಾನೆ. ಹೌದು ಟೊಮೆಟೊ ಕಾಯಲು ಇಬ್ಬರು ಬೌನ್ಸರ್ ಗಳನ್ನು ನೇಮಕ ಮಾಡಿಕೊಂಡಿದ್ದಾನೆ. ರೈತನ ಈ ಐಡಿಯಾ ಇದೀಗ ಸೊಶಿಯಲ್ ಮಿಡಿಯಾದಲ್ಲಿ (Social Media) ವೈರಲ್ (Viral)ಆಗುತ್ತಿದೆ.
ಉತ್ತರ ಪ್ರದೇಶದ ವಾರಣಾಸಿಯ ತರಕಾರಿ ವ್ಯಾಪಾರಿಯೊಬ್ಬ ಟೊಮೆಟೊ ರಕ್ಷಣೆ ಮಾಡಲು ಇಬ್ಬರು ಬೌನ್ಸರ್ ಗಳನ್ನು ನೇಮಕ ಮಾಡಿಕೊಂಡಿದ್ದಾನೆ. ಈ ವ್ಯಾಪಾರಿಯ ಹೆಸರು ಅಜಯ್ ಫೌಜಿ. ಹಲವು ಕಡೆಗಳಲ್ಲಿ ಟೊಮೆಟೊ ಕಳ್ಳತನವಾಗುತ್ತಿದೆ. ಜಮೀನಿನಲ್ಲಿ ಬೆಳೆದ ಟೊಮೆಟೊ ಹಣ್ಣನ್ನು ಬಿಡದೇ ಕಳ್ಳತನ ಮಾಡುತ್ತಿದ್ದಾರೆ. ಇನ್ನು ವ್ಯಾಪಾರ ಮಾಡುವ ಸಮಯದಲ್ಲಿ ಜನ ಬೀಡ್ತಾರಾ..? ಇದೇ ಕಾರಣಕ್ಕೆ ಬೌನ್ಸರ್ ಗಳನ್ನು ನೇಮಕ ಮಾಡಿದ್ದೇನೆ ಅಂತಾರೆ ವ್ಯಾಪಾರಿ ಅಜಯ್ ಫೌಜಿ.
ಟೊಮೆಟೊ ದರ ಹೆಚ್ಚಾಗಿದ್ದಕ್ಕೆ ಜನರು ಕೆ.ಜಿ ಲೆಕ್ಕದಲ್ಲಿ ಖರೀದಿ ಮಾಡುತ್ತಿಲ್ಲ. ಬದಲಾಗಿ ಗ್ರಾಂ ಲೆಕ್ಕದಲ್ಲಿ ಖರೀದಿ ಮಾಡುತ್ತಿದ್ದಾರೆ. ಹೀಗೆ ಇರುವಾಗ ಟೊಮೆಟೊ ಕಳ್ಳತನವಾದರೇ ಎಷ್ಟೊಂದು ಲಾಸ್ ಆಗುತ್ತದೆ. ಇದೇ ಕಾರಣಕ್ಕೆ ಬೌನ್ಸರ್ ಗಳನ್ನ ನೇಮಕ ಮಾಡಿಕೊಂಡಿದ್ದು ಅಂತಾರೆ ವ್ಯಾಪಾರಿ. ಏನೇ ಆಗಲಿ ವ್ಯಾಪಾರಿ ಮಾಡಿರೋ ಐಡಿಯಾ ಮಾತ್ರ ಡಿಫರೆಂಟ್ ಆಗಿದೆ.