Kornersite

Crime Extra Care Just In Karnataka Relationship State

ನಾದಿನಿ ಕಾಟಕ್ಕೆ ಮಗಳ ಜೊತೆ ಆತ್ಮಹತ್ಯೆ ಮಾಡಿಕೊಂಡ ಯೋಧನ ಪತ್ನಿ!

Belagavi: ನಾದಿನಿ ಕಾಟಕ್ಕೆ ಒಂದೇ ಹಗ್ಗಕ್ಕೆ ತನ್ನ ಏಳು ವರ್ಷದ ಮಗಳ ಜೊತೆ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಘಟನೆ ನಡೆದಿರೋದು ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ದಿಂಡಲಕೊಪ್ಪ ಗ್ರಾಮದಲ್ಲಿ. 34 ವರ್ಷದ ಮಹಾದೇವಿ ಇಂಚಲ ಹಾಗೂ 7 ವರ್ಷದ ಚಾಂದಿನಿ ಇಂಚಲ ಆತ್ಮಹತ್ಯೆ ಮಾಡಿಕೊಂಡ ತಾಯಿ-ಮಗಳು.

ಮಹಾದೇವಿ ಇಂಚಲ ಗೋಕಾಕ್ ತಾಲೂಕಿನ ಯೋಧನ ಜೊತೆ ಮದುವೆಯಾಗಿದ್ದಳು. ಏಳು ವರ್ಷಗಳ ಹಿಂದೆ ಪತಿಯ ಅಕಾಲಿಕ ನಿಧನದ ನಂತರ ಮಹಾದೇವಿ ದಿಂಡಲಕೊಪ್ಪದಲ್ಲಿರುವ ತವರು ಮನೆಯಲ್ಲಿ ತನ್ನ ಮಗಳ ಜೊತೆ ವಾಸವಾಗಿದ್ದಳು. ಇದೀಗ ಸಹೋದರ ಹಾಗೂ ನಾದಿನಿಯ ಕಿರುಕುಳದಿಂದ ಬೇಸತ್ತು ತನ್ನ ಹಾಗೂ ತನ್ನ ಮಗಳ ಜೀವನಕ್ಕೆ ಫುಲ್ ಸ್ಟಾಪ್ ಇಟ್ಟಿದ್ದಾಳೆ.

ಈ ಬಗ್ಗೆ ಬೆಳಗಾವಿಯ ಕಿತ್ತೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

You may also like

Crime Karnataka State

ಕೊಲೆಯಲ್ಲಿ ಅಂತ್ಯವಾದ ವ್ಹೀಲಿಂಗ್ ಗಲಾಟೆ

ಹಾಸನ : ವ್ಹೀಲಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜಿಲ್ಲೆಯ ಗವೇನಹಳ್ಳಿಯಲ್ಲಿ ನಡೆದಿದೆ.ಘಟನೆಯಲ್ಲಿ ಆಟೋ ಚಾಲಕ ಸುಮಂತ್ (20) ಕೊಲೆಯಾದ ದುರ್ದೈವ ಯುವಕ.
Crime

ಬೈಕ್ ನಲ್ಲಿಯೇ ಸಹೋದರಿಯ ಶವ ಸಾಗಿಸಿದ ಅಣ್ಣ!

ನವದೆಹಲಿ : ಆಂಬುಲೆನ್ಸ್ ಬರುವುದಕ್ಕೆ ನಿರಾಕರಿಸಿರುವ ಹಿನ್ನೆಲೆಯಲ್ಲಿ ಯುವಕನೊಬ್ಬ ತನ್ನ ಸಹೋದರಿಯ ಮೃತ ದೇಹವನ್ನು ಬೈಕ್ ನಲ್ಲಿಯೇ ತೆಗೆದುಕೊಂಡು ಹೋಗಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಕೌಶಾಂಬಿಯಲ್ಲಿ