ತಮಿಳುನಾಡಿನಲ್ಲಿ ಕೊರಗಜ್ಜ (Koragajja) ದೈವ ಬೇಡಿದವರ ಇಷ್ಟಾರ್ಥ ನೆರವೇರಿಸುವುದರ ಜೊತೆಗೆ ತಪ್ಪು ಮಾಡಿದವರಿಗೆ ಶಿಕ್ಷೆ ನೀಡುವ ಮೂಲಕ ಜನರಲ್ಲಿ ನಂಬಿಕೆ ಉಳಿದುಕೊಂಡಿದೆ. ಇಂತಹ ಪವಾಡವಿರುವ ಕೊರಗಜ್ಜನ ಗುಡಿಗೇ ವ್ಯಕ್ತಿಯೊಬ್ಬ ಬೆಂಕಿ ಇಟ್ತಿದ್ದಾನೆ. ಈ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕು ವೇಣೂರು ಗ್ರಾಮದ ಬಾಡಾರು ಎಂಬಲ್ಲಿ ನಡೆದಿದೆ. ಬಾಡಾರಿನ ಕೊರಗಕಲ್ಲು ಎಂಬಲ್ಲಿ ಭೂ ವಿಚಾರಕ್ಕೆ ನಡೆದ ಗಲಾಟೆ ಪವಾಡಪುರುಷನ ಸನ್ನಿಧಿಗೆ ಬೆಂಕಿ ಇಡುವ ಮೂಲಕ ಅಂತ್ಯವಾಗಿದೆ.
ಕೊರಗಜ್ಜನ ಗುಡಿ ಇರುವ ಜಾಗದ ಬಗ್ಗೆ ಸ್ಥಳೀಯ ವ್ಯಕ್ತಿ ಆಕ್ಷೇಪ ವ್ಯಕ್ತಪಡಿಸಿದ್ದರು. ದೇವಸ್ಥಾನ ಇರುವ ಖಾಲಿ ಜಾಗ ಖಾಸಗಿ ಕುಟುಂಬಸ್ಥರದ್ದು. ಸಾರ್ವಜನಿಕರು ಈ ವಿಚಾರವಾಗಿ ಹಸ್ತಕ್ಷೇಪ ಮಾಡಬಾರದು ಎಂದು ತಗಾದೆ ಎತ್ತಿದ್ದರು. ಕಳೆದ ಕೆಲ ವರ್ಷಗಳಿಂದ ಈ ಸಂಬಂಧ ಸಮಿತಿ ಮತ್ತು ಖಾಸಗಿ ವ್ಯಕ್ತಿ ನಡುವೆ ತಗಾದೆ ಏರ್ಪಟ್ತಿತ್ತು. ಈಗ ಸ್ಥಳೀಯ ವ್ಯಕ್ತಿ ಕೊರಗಜ್ಜನ ದೇವಸ್ಥಾನಕ್ಕೆ ಬೆಂಕಿ ಇಟ್ಟಿದ್ದಾನೆ. ಘಟನೆ ಖಂಡಿಸಿ ಸ್ವಾಮಿ ಕೊರಗಜ್ಜ ಸಮಿತಿ ವೇಣೂರು ಪೊಲೀಸ್ ಟಾಣೆಗೆ ದೂರು ನೀಡಿದ್ದಾರೆ.