ಟಿವಿ ಸಿರಿಯಲ್ ನ ಫೇಮಸ್ ನಟ, ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಮನೆ ಮನೆ ಮಾತಾದ ವಿಜಯ್ ಸೂರ್ಯ ಎರಡನೇ ಮಗುವಿಗೆ ತಂದೆಯಾಗಿದ್ದಾರೆ. 2020ರಲ್ಲಿ ಒಂದನೇ ಮಗುವಿಗೆ ತಂದೆಯಾಗಿದ್ದರು. ಇದೀಗ ಎರಡನೇ ಮಗುವಿಗೆ ತಂದೆಯಾಗಿದ್ದಾರೆ. 2019ರಲ್ಲಿ ಚೈತ್ರಾ ಶ್ರೀನಿವಾಸ್ ಅವರ ಜೊತೆ ಮದುವೆಯಾಗಿದ್ದರು.
ಮಾಧ್ಯಮದ ಜೊತೆ ಮಾತನಾಡಿದ ವಿಜಯ್ ಸೂರ್ಯ ‘ನಮಗೆ ಎರಡನೇ ಮಗು ಹುಟ್ಟಿದೆ, ಗಂಡು ಮಗು’ ಎಂದು ಹೇಳಿದ್ದಾರೆ. ವಿಜಯ್ ಸೂರ್ಯ ಹಾಗೂ ಚೈತ್ರಾ ಶ್ರೀನಿವಾಸ್ ದಂಪತಿ ತಮ್ಮ ಒಂದನೇ ಮಗುವಿಗೆ ಸೋಹನ್ ಎಂದು ಹೆಸರಿಟ್ಟಿದ್ದಾರೆ. ಕಳೆದ ಎರಡು ತಿಂಗಳಿನಿಂದ ವಿಜಯ್ ಸೂರ್ಯ ಬೆಂಗಳೂರು, ಹೈದರಾಬಾದ್ ನಲ್ಲಿ ಶೂಟಿಂಗ್ ನಲ್ಲಿ ಬ್ಯೂಸಿಯಾಗಿದ್ದರು.
ಬೆಂಗಳೂರಿನಲ್ಲಿ ಲಚ್ಚಿ ಧಾರಾವಾಹಿ ಶೂಟಿಂಗ್ ನಲ್ಲಿ ಬ್ಯೂಸಿಯಾಗಿದ್ದರು. ಹೈದರಾಬಾದ್ ನಲ್ಲಿ ಕೃಷ್ಣಮ್ಮ ಕಲ್ಪಿಂಡಿ ನಟಿಸುತ್ತಿದ್ದರು. ಎರಡನೇ ಮಗು ಹುಟ್ಟಿದಾಗ ಹೈದರಾಬಾದ್ ನಲ್ಲಿ ಶೂಟಿಂಗ್ ನಲ್ಲಿ ಬ್ಯೂಸಿಯಾಗಿದ್ದರು. ಸೂರ್ಯ ಹೇಳುವ ಪ್ರಕಾರ, ಜೂನ್ 2 ರಂದು ಎರಡನೇ ಮಗು ಹುಟ್ಟಿದೆ. ಸ್ವಲ್ಪ ಸಮಯದ ನಂತರ ಎಲ್ಲರಿಗೂ ಹೇಳಬೇಕು ಎಂದು ಅಂದುಕೊಂಡಿದ್ದೆ. ಎರಡನೇ ಮಗುವಿಗೆ ಕಾರ್ತಿಕೇಯ ಸೂರ್ಯ ಎಂದು ಹೆಸರಿಟ್ಟಿದ್ದೇವೆ. ಇದೀಗ ಕುಟುಂಬದ ಜೊತೆ ಸಮಯ ಕಳೆಯಲು ಅವಕಾಶ ಸಿಕ್ಕಿದೆ. ಚೈತ್ರಾ ಅವಳ ತವರು ಮನೆಯಲ್ಲಿ ಇದ್ದಾಳೆ. ನಾನು ನನ್ನ ಮೊದಲನೇ ಮಗನ ಜೊತೆ ಮನೆಯಲ್ಲೇ ಇದ್ದೇನೆ ಎಂದು ವಿಜಯ್ ಸೂರ್ಯ ಮಾಧ್ಯಮಕ್ಕೆ ತಿಳಿಸಿದ್ದಾರೆ.

