ಕನ್ನಡದಲ್ಲಿ (Kannada) ಫೇಸ್ ಬುಕ್ (Facebook) ಪೋಸ್ಟ್ ಹಾಕಿ ಎಲ್ಲರ ಗಮನ ಸೆಳೆದಿದ್ದಾರೆ ವಿಂಬಲ್ಡನ್(Wimbledon). ಫೋಟೋವೊಂದಕ್ಕೆ ‘ಭಾರತದ ಸೂಪರ್ ಸ್ಟಾರ್’ ಎಂದು ಕನ್ನಡದಲ್ಲಿ ಕ್ಯಾಪ್ಶನ್ ಬರೆದಿದ್ದಾರೆ. ಈ ಪೋಸ್ಟ್ ನೋಡಿದ ಕನ್ನಡಿಗರು ಖುಷಿಯಾಗಿದ್ದಾರೆ. ಕನ್ನಡಿಗರು ಈ ಪೋಸ್ಟ್ ಗೆ ಕಮೆಂಟ್ ಕೂಡ ಮಾಡುತ್ತಿದ್ದಾರೆ.
ವಿಂಬಲ್ಡನ್ ಟೆನಿಸ್ ಟೂರ್ನಿ ರೋಚಕವಾಗಿ ಸಾಗುತ್ತಿದೆ. ಈ ನಡುವೆ ಕರ್ನಾಟಕ ಸೇರಿದಂತೆ ಭಾರತದಲ್ಲೂ ಟೂರ್ನಿಯ ಪ್ರಮೋಶನ್ ಗೆ ವಿಂಬಲ್ಡನ್ ಮುಂದಾಗಿದೆ. ಕನ್ನಡದಲ್ಲಿ ಪೋಸ್ಟ್ ಮಾಡಿರುವುದು ಪ್ರಮೋಶನ್ ಗಿಮಿಕ್ ಅಂತಲೂ ಕೆಲವರು ಹೇಳುತ್ತಿದ್ದಾರೆ.
ಈಗಾಗಲೇ ಪುರುಷರ ಡಬಲ್ಸ್ ವಿಭಾಗದಲ್ಲಿ ಕನ್ನಡಿಗ ರೋಹನ್ ಬೋಪಣ್ಣ ಮತ್ತು ಆಸ್ಟ್ರೇಲಿಯಾದ ಮ್ಯಾಥ್ಯೂ ಜೋಡಿ ಮೂರನೇ ಸುತ್ತಿಗೆ ಕಾಲಿಟ್ಟಿದ್ದಾರೆ. ಎರಡನೇ ಸುತ್ತಿನ ಹಣಾಹಣಿಯಲ್ಲಿ ಅವರು ಯುನೈಟೆಡ್ ಕಿಂಗ್ ಡಮ್ ನ ಜೋಡಿಯನ್ನು 7-5, 6-3 ರ ನೇರ ಸೆಟ್ ಗಳ ಅಂತರದಲ್ಲಿ ಸೋಲಿಸಿದ್ದಾರೆ. ಈ ನಡುವೆ ವಿಂಬಲ್ಡನ್ ತನ್ನ ಅಧಿಕೃತ ಫೇಸ್ ಬುಕ್ ಅಕೌಂಟ್ ನಲ್ಲಿ ಬೋಪಣ್ಣನ ಫೋಟೋ ಶೇರ್ ಮಾಡಿದೆ.
ಬೋಪಣ್ಣ ಕನ್ನಡಿಗ ಆಗಿದ್ದರಿಂದ ಕನ್ನಡದಲ್ಲಿಯೇ ಪೋಸ್ಟ್ ಹಾಕಿದ್ದು ಎಲ್ಲರ ಗಮನ ಸೆಳೆಯುತ್ತಿದೆ. ಇನ್ನೊಂದು ಗಮನಿಸಬೇಕಾದ ವಿಷಯವೆಂದರೆ ವಿಂಬಲ್ಡನ್ ತನ್ನ ಅಧಿಕೃತ ಖಾತೆಯಲ್ಲಿ ಪೋಸ್ಟ್ ಮಾಡಿದೆ. ಆದರೆ ಕರ್ನಾಟಕ ಜನತೆಗೆ ಮಾತ್ರ ಕಾಣುವಂತೆ ಪ್ರೈವಸಿ ಸೆಟ್ಟಿಂಗ್ ಮಾಡಲಾಗಿದೆ. ಹೀಗಾಗಿ ಇದನ್ನು ಕನ್ನಡಿಗರು ಮಾತ್ರ ನೋಡಲು ಸಾಧ್ಯ. ಇದನ್ನು ಗಮನಿಸಿದ ನೆಟ್ಟಿಗರು ಇದು ಕೇವಲ ಪ್ರಮೋಶನ್ ಗಿಮಿಕ್ ಅಷ್ಟೇ. ಬೇರೆ ರಾಜ್ಯದವರಿಗೆ ಈ ಪೋಸ್ಟ್ ಕಾಣುವುದಿಲ್ಲ ಎಂದು ಕಮೆಂಟ್ ಮಾಡುತ್ತಿದ್ದಾರೆ.